Tuesday, June 28, 2022

Latest Posts

ಗಡಿಯಲ್ಲಿ ಚೀನಾ ದುಸ್ಸಾಹಸ ತೋರಿಸಿದರೆ, ಪ್ರತಿದಾಳಿಗೆ ನಾವು ಸಿದ್ಧ: ಗುಡುಗಿದ ಭಾರತೀಯ ಸೇನೆ

ನವದೆಹಲಿ: ಪ್ಯಾಂಗಾಂಗ್ ತ್ಸೋ ಸರೋವರದ ಉತ್ತರ ಹಾಗೂ ದಕ್ಷಿಣ ದಂಡೆಯ ಬಹುತೇಕ ಭಾಗ ಇದೀಗ ಭಾರತೀಯ ಸೇನೆಯ ವಶದಲ್ಲಿದ್ದು, ಈ ಎತ್ತರದ ಪ್ರದೇಶಗಳಲ್ಲಿ ಚೀನಿ ಸೇನೆ ಯಾವುದೇ ಚಟುವಟಿಕೆ ನಡೆಸುವುದು ಕಂಡುಬಂದರೆ ನಾವು ಪ್ರತಿದಾಳಿ ಮಾಡುತ್ತೇವೆ ಎಂದು ಭಾರತ ಎಚ್ಚರಿಸಿದೆ.
ಪ್ಯಾಂಗಾಂಗ್ ತ್ಸೋ ಸರೋವರದ 8 ಫಿಂಗರ್ ಪಾಯಿಂಟ್ ಪ್ರದೇಶಗಳು ಭಾರತೀಯ ಸೇನೆಯ ವಶದಲ್ಲಿದ್ದು, ಸದ್ಯದ ಪರಿಸ್ಥಿತಿ ಕಾಯ್ದುಕೊಳ್ಳುವುದು ತುಂಬ ಅವಶ್ಯ ಎಂದು ಕೇಂದ್ರ ಸರ್ಕಾರದ ಉನ್ನತ ಮೂಲಗಳು ಅಭಿಪ್ರಾಯಪಟ್ಟಿವೆ.
ಚೀನಿ ಪಡೆಗಳು ಪ್ಯಾಂಗಾಂಗ್ ತ್ಸೋ ಸರೋವರದ ಎತ್ತರದ ಪ್ರದೇಶಗಳ ಮೇಲೆ ದಾಳಿ ನಡೆಸಲು ಮುಂದಾದರೆ, ನಾವು ಪ್ರತಿದಾಳಿ ಮಾಡಲು ಹಿಂಜರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಪ್ಯಾಂಗಾಂಗ್ ತ್ಸೋ ಸರೋವರದ ಬಳಿ ಚೀನಾ ಸುಮಾರು 7-8 ಸಾವಿರ ಸೈನಿಕರನ್ನು ಜಮಾವಣೆ ಮಾಡಿದೆ. ಹೀಗಾಗಿ ಈ ಪ್ರದೇಶದಲ್ಲಿ ಮತ್ತೊಂದು ಬಾರಿ ಮಿಲಿಟರಿ ಚಟುವಟಿಕೆ ಕಂಡು ಬರಲಿದೆ ಎಂಬುದು ಭಾರತದ ಅನುಮಾನವಾಗಿದೆ.
ಹೀಗಾಗಿ ಭಾರತೀಯ ಸೇನೆ ಪ್ಯಾಂಗಾಂಗ್ ತ್ಸೋ ಸರೋವರದ ರಕ್ಷಣೆಗೆ ಎಲ್ಲ ರೀತಿಯಲ್ಲಿ ಸಿದ್ಧವಾಗಿದ್ದು , ಯಾವುದೇ ಸಂಭಾವ್ಯ ದಾಳಿಯನ್ನು ಎದುರಿಸಲು ಸಜ್ಜಾಗಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss