Wednesday, July 6, 2022

Latest Posts

ಗಡಿಯಲ್ಲಿ ದೀಪ ಬೆಳಗಿಸಿ, ನಿಮ್ಮ ರಕ್ಷಣೆಗೆ ನಾವಿದ್ದೇವೆ ಎಂದ ವೀರ ಯೋಧರು

ಹೊಸದಿಗಂತ ಆನ್ ಲೈನ್ ಡೆಸ್ಕ್:

ದೇಶದಾದ್ಯಂತ ದೀಪಾವಳಿ ಸಂಭ್ರಮ ಮನೆ ಮಾಡಿದ್ದು, ಗಡಿ ಪೋಸ್ಟ್ ಗಳಲ್ಲಿ ಭಾರತೀಯ ಯೋಧರು ದೀಪ ಬೆಳಗಿ, ಸಿಹಿ ತಿಂದು ಹಬ್ಬ ಆಚರಿಸಿದರು. ಜಮ್ಮುವಿನ ಆರ್.ಎಸ್.ಪುರದಲ್ಲಿ ದೀಪಾವಳಿ ಆಚರಿಸಿದ ಬಿಎಸ್ಎಫ್ ಯೊಧರು ಕ್ಯಾಂಡಲ್ ಹಚ್ಚಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.

‘ನಮಗೆ ಎರಡು ಕುಟುಂಬಗಳನ್ನು ಹೊಂದಿದ್ದೇವೆ, ಒಂದು ನಮ್ಮ ಮನೆ ಹಾಗೂ ಮತ್ತೊಂದು ನಮ್ಮ ಬಿಎಸ್ ಎಫ್ ಯೋಧರ ಕುಟುಂಬ. ಭಾರತೀಯರು ಯಾವುದೇ ಆತಂಕ ಇಲ್ಲದೆ ದೀಪಾವಳಿ ಆಚರಿಸಿ, ನಿಮ್ಮ ರಕ್ಷಣೆ ಖಚಿತಪಡಿಸಿಕೊಳ್ಳಲು ನಾವಿದ್ದೇವೆ’. ಎಂದು ಬಿಎಸ್ ಎಫ್ ಯೋಧರು ಸಂತಸ ಹಂಚಿಕೊಂಡಿದ್ದಾರೆ.

ತ್ರಿಪುರದಲ್ಲಿ ದೀಪಾವಳಿಯನ್ನು ಅಖೌರಾ-ಅಗರ್ತಲಾ ಇಂಟಿಗ್ರೇಟೆಡ್ ಚೆಕ್ ಪೋಸ್ಟ್‌ನಲ್ಲಿ ಬಿಎಸ್‌ಎಫ್ ಸಿಬ್ಬಂದಿ ಮತ್ತು ಬಾರ್ಡರ್ ಗಾರ್ಡ್ ಬಾಂಗ್ಲಾದೇಶ (ಬಿಜಿಬಿ) ದೀಪ ಬೆಳಗಿಸಿ, ಸಿಹಿ ತಿಂದು ಆನಂದಿಸಿದರು.

ಪ್ರತಿ ವರ್ಷದಂತೆ ಈ ವರ್ಷವೂ ಪ್ರಧಾನಿ ನರೇಂದ್ರ ಮೋದಿ ಗಡಿಯಲ್ಲಿನ ಸೈನಿಕರ ಜೊತೆ ದೀಪಾವಳಿ ಆಚರಿಸಲಿದ್ದಾರೆ. ಈ ವರ್ಷ ಗುಜರಾತ್ ನ ಯೋಧರ ಜೊತೆ ಪ್ರಧಾನಿ ಹಬ್ಬ ಆಚರಿಸಲಿದ್ದು, ಅವರ ಜೊತೆಗೆ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಬಿಪಿನ್ ರಾವತ್ ಇರಲಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss