spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, December 4, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಗಡಿಯಲ್ಲಿ ನೇಪಾಳಿ ಸೇನೆ ಗುಂಡಿನ ದಾಳಿ: ಓರ್ವ ಭಾರತೀಯ ಪ್ರಜೆ ಸಾವು, ಇಬ್ಬರಿಗೆ ಗಾಯ

- Advertisement -Nitte

ಬಿಹಾರ: ಇಲ್ಲಿನ ಗಡಿಭಾಗದಲ್ಲಿ ನೇಪಾಳಿ ಸೇನೆ ನಡೆಸಿದ ಗುಂಡಿನ ದಾಳಿಗೆ ಭಾರತದ ಓರ್ವ ಪ್ರಜೆ ಸಾವನ್ನಪ್ಪಿ ಇಬ್ಬರು ಗಾಯಗೊಂಡಿದ್ದಾರೆ.
ಘಟನೆ ಶುಕ್ರವಾರ ನಡೆದಿದೆ. ಸೋನೆವಾರ್ಸಾ ಪೊಲೀಸ್ ಠಾಣಾ ವ್ಯಾಪ್ತಿಯ ಪಿಪ್ರಾ ಪರ್ಸೈನ್ ಪಂಚಾಯತ್‌ನ ಲಾಲ್‌ಬಂದಿ-ಜಾಂಕಿ ನಗರ್ ಬಾರ್ಡರ್‌ನಲ್ಲಿ ಈ ಬೆಳವಣಿಗೆ ನಡೆದಿದ್ದು, ಗಾಯಾಳು ವ್ಯಕ್ತಿಯೊಬ್ಬನನ್ನು ನೇಪಾಳ ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಜಿತೇಂದ್ರ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಏನಾಗಿತ್ತು?
ಲಾಲ್ ಬಂಡಿ ಪ್ರದೇಶದಲ್ಲಿ ಕೆಲವು ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದರು. ಈ ವೇಳೆ ನೇಪಾಳಿ ಸೈನಿಕರು ಗುಂಡಿನ ದಾಳಿ ನಡೆಸಿದ್ದಾರೆ. ಗುಂಡಿನೇಟಿಗೆ ಸ್ಥಳೀಯ ನಿವಾಸಿ ವಿಕೇಶ್ ಕುಮಾರ್ (25) ಸ್ಥಳದಲ್ಲಿ ಸಾವನ್ನಪ್ಪಿದ್ದರೆ, ಉಮೇಶ್ ರಾಮ್ ಹಾಗೂ ಉದಯ್ ಠಾಕೂರ್ ಎಂಬವರು ಗುಂಡಿನೇಟಿಗೆ ಗಾಯಗೊಂಡಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ನೇಪಾಳಿ ಸೇನೆ, ಭಾರತೀಯರು ನೇಪಾಳ ಗಡಿ ನುಸುಳಲು ಯತ್ನಿಸಿದ್ದರಿಂದ ಗುಂಡು ಹಾರಿಸಿರುವುದಾಗಿ ಹೇಳಿಕೊಂಡಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss