Saturday, January 23, 2021

Latest Posts

ಗಡಿಯಲ್ಲಿ ಪಾಕ್ ಡ್ರೋನ್: ಬಿಎಸ್ಸೆಫ್ ಗುಂಡಿಗೆ ಅಂಜಿ ಮರಳಿ ಗೂಡಿಗೆ!

ಹೊಸ ದಿಗಂತ ಆನ್‌ಲೈನ್ ಡೆಸ್ಕ್:

ಇನ್ನೂ ಬುದ್ಧಿ ಕಲಿಯದ ಪಾಕಿಸ್ತಾನ ಮತ್ತೆ ಗಡಿಯಲ್ಲಿ ತನ್ನ ಲಂಪಟತನ ತೋರಿಸಿದೆ. ಜಮ್ಮು ಕಾಶ್ಮೀರದ ಆರ್.ಎಸ್.ಪುರ ಸೆಕ್ಟರ್‌ನ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕ್ ಡ್ರೋನ್ ಹಾರಿಬಿಟ್ಟಿದ್ದು, ಇದರ ಮೇಲೆ ಬಿಎಸ್‌ಎಫ್ ಯೋಧರು ಗುಂಡಿನ ದಾಳಿ ನಡೆಸಿದ ಬೆನ್ನಿಗೇ ಡ್ರೋನ್ ಮತ್ತೆ ಮರಳಿ ‘ಪಾಪಿ’ಸ್ತಾನ ಸೇರಿದೆ.

ಶನಿವಾರ ರಾತ್ರಿ ಘಟನೆ ನಡೆದಿದ್ದು, ಡ್ರೋನ್ ಹಾರಾಟ ನಡೆಸಿದ ಸ್ಥಳದಲ್ಲಿ ಪರಿಶೀಲನೆ ನಡೆಯುತ್ತಿದೆ. ಈ ಬಗ್ಗೆ ಪ್ರಕಟಣೆ ಮೂಲಕ ಮಾಹಿತಿ ನೀಡಿರುವ ಬಿಎಸ್‌ಎಫ್, ಜಮ್ಮು ಮತ್ತು ಕಾಶ್ಮೀರದ ಆರ್.ಎಸ್. ಪುರಾ ಸೆಕ್ಟರ್‌ನ ಅರ್ನಿಯಾ ಎಂಬ ಪ್ರದೇಶದ ಅಂತಾರಾಷ್ಟ್ರೀಯ ಗಡಿಯಲ್ಲಿ ಶನಿವಾರ ರಾತ್ರಿ ಡ್ರೋನ್ ಕಾಣಿಸಿಕೊಂಡಿದೆ.

ಬಿಎಸ್‌ಎಫ್ ಸೈನಿಕರು ಅದರ ಮೇಲೆ ಗುಂಡು ಹಾರಿಸಿದ ಬೆನ್ನಿಗೇ ಅದು ಪಾಕಿಸ್ತಾನದ ಕಡೆಗೆ ಹಿಂತಿರುಗಿತು ಎಂದು ಹೇಳಿದೆ.

ಕೇವಲ ಒಂದು ವಾರದ ಹಿಂದೆಯಷ್ಟೇ ಜಮ್ಮು ಕಾಶ್ಮೀರದ ಪೂoಚ್ ಜಿಲ್ಲೆಯ ಮೆಂಧರ್ ಸೆಕ್ಟರ್‌ನ ಎಲ್‌ಒಸಿ ಬಳಿ ಹಾರುವ ‘ನಿಗೂಢ’ ವಸ್ತುವೊಂದನ್ನು ಗುರುತಿಸಲಾಗಿತ್ತು. ಅದು ಕೂಡಾ ಭಾರತ ಭೂಪ್ರದೇಶದ ಮೇಲೆ ಹಾರಾಟ ನಡೆಸಿತ್ತು. ಇದಾಗಿ ಕೆಲವೇ ದಿನಗಳ ಬಳಿಕ ಈ ಬೆಳವಣಿಗೆ ದಾಖಲಾಗಿದೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss

error: Content is protected !!