ಹೊಸದಿಗಂತ ಆನ್ಲೈನ್ ಡೆಸ್ಕ್:
ದೆಹಲಿಯ ಗಡಿಯಲ್ಲಿ ಪ್ರತಿಭಟಿಸುತ್ತಿರುವ ರೈತರಿಗೆ ತಾವು ಏತಕ್ಕಾಗಿ ಪ್ರತಿಭಟಿಸುತ್ತಿದ್ದೇವೆ ಎಂದೇ ಗೊತ್ತಿಲ್ಲ ಎಂದು ಬಿಜೆಪಿ ಸಂಸದೆ ಹೇಮಮಾಲಿನಿ ಹೇಳಿದ್ದಾರೆ.
ರೈತರು ತಮಗೆ ಏನು ಬೇಕು, ಕಾಯ್ದೆಯಿಂದ ಅವರಿಗೆ ಆಗುವ ಅನುಕೂಲ, ಅನಾನುಕೂಲ ಏನು ಎನ್ನುವುದೇ ತಿಳಿದಿಲ್ಲ. ಯಾರೋ ಹೇಳಿದ ಕಾರಣ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದಿದ್ದಾರೆ.
ರೈತರು ಶಾಂತವಾಗಲು ಸುಪ್ರೀಂ ಕೋರ್ಟ್ ತಡೆಯಾಜ್ಞೆ ಅಗತ್ಯವಿತ್ತು ನಮ್ಮ ಸರ್ಕಾರ ಅವರಿಗೆ ನಿರಂತರವಾಗಿ ಏನು ಬೇಕು ಎಂದು ಕೇಳುತ್ತಿದ್ದರೂ ಅವರು ತಮ್ಮ ನಿಜವಾದ ಸಮಸ್ಯೆ ಕುರಿತು ಹೇಳಿಲ್ಲ. ಇದರಿಂದ ತಿಳಿಯುತ್ತದೇ ಅವರಿಗೆ ಏನು ಬೇಕೆಂದು ತಿಳಿದೇ ಇಲ್ಲ, ಯಾರದೋ ಅಣತಿಯಂತೆ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.