ಹೊಸದಿಲ್ಲಿ: ಸಿಕ್ಕಿಂ ಪ್ರಾಂತ್ಯದ ನಾಕುಲ ಗಡಿಭಾಗದಲ್ಲಿ ಭಾರತ- ಚೀನಾ ಸೈನಿಕ ಪಡೆ ಮುಖಾಮುಖಿಯಾಗಿದೆ. ಶನಿವಾರ ರಾತ್ರಿ ಎರಡೂ ಕಡೆಯ ಸೈನಿಕರು ಮುಖಾಮುಖಿಯಾಗಿದ್ದು ಕೆಲವರಿಗೆ ಗಾಯಗಳಾಗಿವೆ. ಮುಖಾಮುಖಿ ನಂತರ ಸ್ಥಳೀಯ ಮಟ್ಟದ ಮಾತುಕತೆ ನಂತರ ಸರಹದ್ದಿನಲ್ಲಿ ಸಹಜ ಸ್ಥಿತಿ ನೆಲೆಸಿದೆ.
2017 ರಲ್ಲಿ ಡೊಕ್ಲಾಂ ಗಡಿ ಪ್ರದೇಶದಲ್ಲಿ ಚೀನಾ ಉದ್ವಿಗ್ನತೆ ಸೃಷ್ಟಿಸಿತ್ತು. ಶನಿವಾರದಂದು ಚೀನಾ ಸೈನಿಕ ಪಡೆಗಳ ಜೊತೆ ಮುಖಾಮುಖಿಯಾಗಿದ್ದನ್ನು ಭಾರತ ಖಚಿತಪಡಿಸಿದೆ.