ಹೊಸದಿಗಂತ ಆನ್ ಲೈನ್ ಡೆಸ್ಕ್:
ಭಾರತ ಚೀನಾ ಗಡಿ ಸಮಸ್ಯೆ ಅಂತ್ಯಗೊಳ್ಳದ ಹಿನ್ನಲೆ ಪೂರ್ವ ಲಡಾಖ್ ನಲ್ಲಿ ಭಾರತೀಯ ಯೋಧರಿಗೆ ನೂತನ ವಸತಿ ಗೃಹ ರೂಪುಗೊಳಿಸಲಾಗಿದೆ.
ಲಡಾಖ್ ನಲ್ಲಿ 30 ರಿಂದ 40 ಡಿಗ್ರಿ ಸೆಲ್ಸಿಯಸ್ ನಷ್ಟು ಚಳಿ ಹೆಚ್ಚಾಗಿದ್ದು, ಹಿಮಪಾತವಾಗುವ ಸಾಧ್ಯತೆಗಳಿವೆ. ಈ ಹಿನ್ನಲೆ ಭಾರತೀಯ ಸೈನಿಕರಿಗೆ ವಿಶೇಷ ವಸತಿ ಗೃಹ ಮಾಡಲಾಗಿದೆ.
ಇಲ್ಲಿ ಯೋಧರಿಗೆ ನೀರು, ವಿದ್ಯುತ್, ಹಾಸಿಗೆ ಸೇರದಂತೆ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡಲಾಗಿದೆ ಎಂದು ಸೇನೆ ತಿಳಿಸಿದೆ. ಈ ಬಗ್ಗೆ ಒಂದು ವಿಡಿಯೋ ರಿಲೀಸ್ ಮಾಡಿರುವ ಭಾರತೀಯ ಸೇನೆ ವಸತಿ ಗೃಹದ ಚಿತ್ರಣ ಮಾಡಿದೆ.
#WATCH Eastern Ladakh: In order to ensure operational efficiency of troops deployed in winters, Indian Army has completed establishment of habitat facilities for all troops deployed in the sector. pic.twitter.com/H6Sm5VG541
— ANI (@ANI) November 18, 2020
ಚೀನಾದ ಗಡಿಯಲ್ಲಿ ತನ್ನ ಸೈನಿಕರನ್ನು ಹಿಂಪಡೆಯದ ಹಿನ್ನಲೆ ಗಡಿಯಲ್ಲಿ ಸಾವಿರಾರು ಯೋಧರು ರಕ್ಷಣಗೆ ನಿಂತಿದ್ದಾರೆ. ಗಲ್ವಾನ್ ಕಣಿವೆಯಲ್ಲಿ ಚೀನಾ ಭಾರತೀಯ 20 ಯೋಧರನ್ನು ಹತ್ಯೆ ಮಾಡಿದ ಕಾರಣ ಭಾರತೀಯ ಸೇನೆ 40 ಚೀನಿ ಸೈನಿಕರನ್ನು ಸದೆಬಡಿದಿತ್ತು.