Saturday, August 13, 2022

Latest Posts

ಗಡಿಯಲ್ಲಿ ಭಾರತೀಯ ಯೋಧರ ಹತ್ಯೆ: ಹುತಾತ್ಮ ಸೈನಿಕರಿಗೆ ಕಂಬನಿ ಮಿಡಿದ ಅಮೆರಿಕ

ವಾಷಿಂಗ್ಟನ್: ಚೀನಾ ಕುತಂತ್ರಕ್ಕೆ ಹುತಾತ್ಮರಾದ 20 ಮಂದಿ ಭಾರತೀಯ ಸೈನಿಕರಿಗೆ ಅಮೆರಿಕ ಕಂಬನಿ ಮಿಡಿದಿದೆ.
ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೋ ಈಬಗ್ಗೆ ಹೇಳಿಕೆ ನೀಡಿದ್ದು, ಚೀನಾದ ಜೊತೆಗಿನ ಸಂಘರ್ಷದಲ್ಲಿ ಹುತಾತ್ಮರಾದ ಸೈನಿಕರಿಗೆ ಅಮೆರಿಕ ತನ್ನ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸುತ್ತಿದೆ. ಯೋಧರ ಕುಟುಂಬ, ಆಪ್ತರು ಹಾಗೂ ಸಮುದಾಯದ ನೋವಿನ ಜೊತೆಗೆ ಅಮೆರಿಕವೂ ಭಾಗಿಯಾಗುತ್ತದೆ ಎಂದು ತಿಳಿಸಿದ್ದಾರೆ.
ಈ ನಡುವೆ ಅಮೆರಿಕ ಅಧಿಕೃತವಾಗಿ ಭಾರತದ ಪರ ನಿಂತಿದ್ದು, ಅಮೆರಿಕ ಮಧ್ಯಸ್ಥಿಕೆ ಕುರಿತು ಪ್ರತಿಕ್ರಿಯಿಸಿರುವ ಚೀನಾ, ಗಡಿ ವಿವಾದಕ್ಕೆ ಸಂಬಂಧಿಸಿ ಚರ್ಚೆಗೆ ಉಭಯ ದೇಶಗಳ ನಡುವೆ ಬಹಳಷ್ಟು ವೇದಿಕೆಗಳಿವೆ. ಪರಿಹಾರ ಹುಡುಕಲು ಮೂರನೇ ದೇಶಗಳ ಅಗತ್ಯವಿಲ್ಲ ಎಂದು ಹೇಳಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss