ಬಳ್ಳಾರಿ: ಶ್ರೀ ಕೃಷ್ಣ ಜನ್ಮಾಷ್ಠಮಿಯನ್ನು ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಮಂಗಳವಾರ ಆಚರಿಸಲಾಯಿತು. ನಗರ ಸೇರಿದಂತೆ ಜಿಲ್ಲೆಯ ಶ್ರೀಕೃಷ್ಣ ಮಂದಿರ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿ ನಿಮಿತ್ತ ವಿವಿಧ ಪೂಜೆಗಳು ನಡೆದವು. ಬಹುತೇಕ ಎಲ್ಲ ಜನರು ದೇವಾಲಯಕ್ಕೆ ತೆರಳಿ ಶ್ರೀ ಕೃಷ್ಣನ ದರ್ಶನ ಪಡೆದರು. ನಂತರ ಮನೆಯಲ್ಲಿ ಶ್ರೀ ಕೃಷ್ಣನಿಗೆ ನೈವಿದ್ಯ, ವಿಶೇಷ ಪೂಜೆ ಸಲ್ಲಿಸಿ ಶ್ರೀ ಕೃಷ್ಣನಿಗೆ ಹಾಲಿನ ಮೂಲಕ ಅರ್ಘ್ಯ ಸಮರ್ಪಿಸಿದರು.
ನಗರದ ಕಪ್ಪಗಲ್ ರಸ್ತೆಯ ಶ್ರೀ ಕೃಷ್ಣ ಮಂದಿರದಲ್ಲಿ ವಿಶೇಷ ಪೂಜೆಗಳು ನಡೆದವು. ಜನ್ಮಾಷ್ಠಮಿ ಹಿನ್ನೆಲೆ ದೇವಾಲಯಕ್ಕೆ ಹೆಚ್ಚು ಜನರು ಆಗಮಿಸಿ ಸರದಿಯಲ್ಲಿ ನಿಂತು ಶ್ರೀ ಕೃಷ್ಣನ ದರ್ಶನ ಪಡೆದರು.
ಕೊವೀಡ್- ೧೯ ಹಿನ್ನೆಲೆ ದೇವಾಲಯದ ಮುಖ್ಯಸ್ಥರು ಸರ್ಕಾರದ ನಿಯಮಗಳಂತೆ ಸಾಮಾಜಿಕ ಅಂತರ, ಸ್ಯಾನಿಟ್ಯಜರ್ ಬಳಕೆ, ಮಾಸ್ಕ ಕಡ್ಡಾಯ ಸೇರಿದಂತೆ ಎಲ್ಲ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರು. ಶ್ರೀ ಕೃಷ್ಣ ಜನ್ಮಾಷ್ಠಮಿ ಹಿನ್ನೆಲೆ ದೇವಾಲಯ ತಳಿರು ತೊರಣಗಳಿಂದ ಕಂಗೊಳಿಸುತ್ತಿತ್ತು.