Wednesday, June 29, 2022

Latest Posts

ಗಣಿನಾಡು ಬಳ್ಳಾರಿ ಜಿಲ್ಲೆಯಾದ್ಯಂತ ಭಾರೀ ಮಳೆ: ಹಿರೇಹಳ್ಳ ಸೇತುವೆ ಸಂರ್ಪೂರ್ಣ ಮುಳುಗಡೆ

ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯಾದ್ಯಂತ ಕಳೆದ ಎರಡು ದಿನಗಳಿಂದ ಸುರಿದ ಮಳೆಗೆ ಜಿಲ್ಲೆಯ ನಾನಾ ಕಡೆಯ ಹಳ್ಳ, ಸೇತುವೆಗಳು ತುಂಬಿ ಹರಿಯುತ್ತಿವೆ. ಜಿಲ್ಲೆಯ ಸಿರಗುಪ್ಪ ಸಮೀಪದ ದರೂರು ಗ್ರಾಮದ ಹಿರೇಹಳ್ಳ ಸೇತುವೆ ತುಂಬಿ ಹರಿಯುತ್ತಿದ್ದು, ಸಂಚಾರ ಕೆಲ‌ ಹೊತ್ತು ಸ್ಥಗಿತಗೊಂಡಿತ್ತು.
ನಂತರ ನೀರಿನ ಪ್ರಮಾಣ ಕಡಿಮೆಯಾದ ಬಳಿಕ ಸಂಚಾರಕ್ಕೆ ಮುಕ್ತವಾಯಿತು. ಜಿಲ್ಲೆಯ ಸಂಡೂರು ತಾಲೂಕು ವ್ಯಾಪ್ತಿಯ ಕುಡಿತೀನಿ ಸೇರಿದಂತೆ ಎರಂಗಳಿ, ವದ್ದಟ್ಟಿ ,ಕೋಳೂರು, ಚಾನಾಳು, ದಮ್ಮೂರು, ಹೊಸಳ್ಳಿ, ಹಾಗಲೂರು’ ದರೂರು, ಕರೂರು, ಗೋಸಬಾಳ ,ಬೂದುಗುಪ್ಪ ,ಬಲಕುಂದಿಯ ನಾನಾ ಕಡೆಯ ಹಳ್ಳದ ನೀರು ವೇದಾವತಿ ನದಿಗೆ ಸೇರಲಿದೆ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss