Sunday, June 26, 2022

Latest Posts

ಗಣಿನಾಡು ಬಳ್ಳಾರಿ ಜಿಲ್ಲೆಯ ಬೈಲೂರು ಗ್ರಾಮದ 13 ಜನರ ಅವಿರೋಧ ಆಯ್ಕೆ ಅಸಿಂಧುಗೊಳಿಸಿದ ಆಯೋಗ

ಹೊಸ ದಿಗಂತ ವರದಿ, ಬಳ್ಳಾರಿ:

ಗಣಿನಾಡು ಜಿಲ್ಲೆಯ ಕುರುಗೋಡು ತಾಲೂಕಿನ ಸಿಂಧಿಗೇರಿ ಗ್ರಾ.ಪಂ.ವ್ಯಾಪ್ತಿಯ ಬೈಲೂರು ಗ್ರಾಮದ 13 ಸದಸ್ಯರು ಅವಿರೋಧ ಆಯ್ಕೆಯನ್ನು ರಾಜ್ಯ ಚುನಾವಣಾ ಆಯೋಗ ಅಸಿಂಧು ಗೊಳಿಸಿ ಆದೇಶ ಹೊರಡಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದೆ. ಇದೇ
ಡಿ. 22 ರಂದು ಮತದಾನ ನಡೆಯಬೇಕಿತ್ತು.‌ ಆದರೆ, ಬೈಲೂರು ಗ್ರಾಮದ 13 ಸದಸ್ಯ ಸ್ಥಾನಗಳಿಗೆ ಮಾರೆಮ್ಮ‌ ದೇವಸ್ಥಾನ ನಿರ್ಮಾಣಕ್ಕೆ ಹಣ ನೀಡುವವರನ್ನು ಅವಿರೋಧ ಆಯ್ಕೆ ಮಾಡಲು ಗ್ರಾಮಸ್ಥರು ಈ ತಿಂಗಳ 5 ರಂದು ತೀರ್ಮಾನಿಸಿದ್ದರು. ಅದೇ ರೀತಿ ಹರಾಜ್ ಮಾಡುವ ಮೂಲಕ 51ಲಕ್ಷದ 20 ಸಾವಿರ ರೂ.ಗೆ 13 ಸದಸ್ಯರನ್ನು ಆಯ್ಕೆ ಮಾಡಲಾಗಿತ್ತು.
ಈ ಕುರಿತು ಮಾಧ್ಯಮಗಳಲ್ಲಿ‌ ವರದಿಯಾದ ಬಳಿಕ ಜಿಲ್ಲಾಡಳಿತ ಅವರೆಲ್ಲರ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸಿ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು. ವ್ಯಾಪ್ತಿಯ ಕುರಗೋಡ್ ತಹಸಿಲ್ದಾರ್ ರಾಘವೇಂದ್ರ ಅವರು ಗ್ರಾಮಕ್ಕೆ ಭೇಟಿ‌ ನೀಡಿ‌, ಅವರು ನೀಡಿದ ವರದಿ ಆಧಾರದ ಮೇಲೆ ರಾಜ್ಯ ಚುನಾವಾಣಾ ಆಯೋಗ ಆ 13 ಸದಸ್ಯ ಸ್ಥಾನಗಳಿಗೆ ನಡೆದ ಅವಿರೋಧ ಆಯ್ಕೆಯಾದರನ್ನು ಅಸಿಂದುಗೊಳಿಸಿ ಆದೇಶ ನೀಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss