Wednesday, August 10, 2022

Latest Posts

ಗಣೇಶ ವಿಸರ್ಜನೆ ಪ್ರಸಾದ| 60 ಮಂದಿ ಅಸ್ವಸ್ಥ

ತುಮಕೂರು: ತಿಪಟೂರು ತಾಲ್ಲೂಕಿನ ಬಿಳಿಗೆರೆ ಕಾಲೋನಿಯಲ್ಲಿ ಗಣೇಶ ವಿಸರ್ಜನೆಯ ವೇಳೆಯಲ್ಲಿ ನೀಡಿದ ಪ್ರಸಾದ ತಿಂದು 60 ಮಂದಿ ಅಸ್ವಸ್ಥಗೊಂಡಿರುವ ಘಟನೆ ನಡೆದಿದೆ.

ಎರಡು ದಿನಗಳ ಹಿಂದೆ ಗ್ರಾಮದಲ್ಲಿ ಯುವಕರು ಗಣಪತಿ ವಿಸರ್ಜನೆ ಮಾಡುವ ಸಂದರ್ಭದಲ್ಲಿ ಹೆಸರುಕಾಳು ಹುಸಲಿಯನ್ನು ನೀಡಿದ್ದರು. ಅದನ್ನು ತಿಂದಂತಹವರಿಗೆ ಒಂದು ದಿ‌ನದ ನಂತರ ಹಲವರು ಸುಸ್ತು, ವಾಂತಿ, ಬೇದಿಯಂತಹ ಲಕ್ಷಣಗಳು ಕಾಣಿಸಿಕೊಂಡಿದೆ. ಕೂಡಲೇ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಅದರೂ ಚಿಕಿತ್ಸೆ ಫಲಕಾರಿ ಅಗದೇ ಹೆಚ್ಚಿನ ಪ್ರಮಾಣದಲ್ಲಿ ಸುಸ್ತಾಗಿರುವ ಹಿನ್ನೆಲೆಯಲ್ಲಿ ತಿಪಟೂರು ಸಾರ್ವಜನಿಕ ಆಸ್ಪತ್ರೆಗೆ ಇಂದು ದಾಖಲಾಗಿದ್ದಾರೆ.

ಆದರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಸ್ಥಳಾವಾಕಾಶವಾಗದೆ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ನಂತರ ಶಾಸಕರು ಆಸ್ಪತ್ರೆಗೆ ಆಗಮಿಸಿ‌ ತಾಯಿ ಮಗುವಿನ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ನೀಡಲು ಸೂಚಿಸಿದ್ದಾರೆ.

ಸದ್ಯ ಎಲ್ಲರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss