Monday, August 8, 2022

Latest Posts

ಗದಗ| ಎಚ್.ವಿಶ್ವನಾಥ್ ಅವರನ್ನು ಅನಾಥರಾಗಿ ಮಾಡಿಲ್ಲ: ಸಚಿವ ಸೋಮಶೇಖರ್

ಗದಗ: ಎಚ್.ವಿಶ್ವನಾಥ ಅವರು ಅನಾಥರಾಗಿಲ್ಲ ಮುಂದಿನ ದಿನಗಳಲ್ಲಿ ಅವರನ್ನು ಎಂಎಲ್ ಸಿ ಮಾಡಲಾಗುವದು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನವರು ನುಡಿದಂತೆ ನಡೆದಿದ್ದಾರೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ ಅವರು ಹೇಳಿದರು.
ಅವರು ಶನಿವಾರ ನಗರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿ, ಎಚ್.ವಿಶ್ವನಾಥ ಅವರು ನಮ್ಮ ಜೊತೆಗಿದ್ದಾರೆ. ಬಿಜೆಪಿ ಪಕ್ಷವು ಅವರ ಜೊತೆಗೆ ಇದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಚರ್ಚಿಸಲಾಗಿದೆ. ಮುಂದಿನ ದಿನಗಳಲ್ಲಿ ಅವರನ್ನು ಎಂಎಲ್ ಸಿ ಆಗುವ ಅವಕಾಶವಿದೆ.ಇದಕ್ಕೆ ವಿಶ್ವನಾಥ ಅವರು ಒಪ್ಪಿದ್ದಾರೆ.ಈಗಾಗಲೆ ಪಕ್ಷಕ್ಕೆ ಬಂದವರಲ್ಲಿ ನಾಗರಾಜ, ಶಂಕರ ಸೇರಿದಂತೆ 14 ಜನರಿಗೆ ಅವಕಾಶ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಮುನಿರತ್ನಂ ಹಾಗೂ ಪ್ರತಾಪಗೌಡ ಅವರಿಗೆ ಹಂತ ಹಂತವಾಗಿ ಅವಕಾಶ ನೀಡಲಾಗುವುದು ಪಕ್ಷಕ್ಕೆ ಬಂದವರಿಗೆ ಯಾರಿಗೂ ಇಲ್ಲ ಎನ್ನುವ ಪ್ರಶ್ನೆ ಇಲ್ಲ ಎಂದು ಸಚಿವ ಎಸ್.ಟಿ.ಸೋಮಶೇಖರ ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss