ಗದಗ: ಜಿಲ್ಲೆಗೆ ಭಾನುವಾರ ಒಂದೇ ದಿನಕ್ಕೆ 18 ಪಾಸಿಟಿವ್ ಪ್ರಕರಣಗಳು ದಾಖಲಾಗುವು ಮೂಲಕ ಇವರೆಗೆ ಸೋಂಕಿತರ ಸಂಖ್ಯೆ 78 ಕ್ಕೆ ಏರಿದೆ ಇದರಿಂದ ಜಿಲ್ಲೆಯ ಜನರಿಗೆ ಆತಂಕ ಶುರುವಾಗಿ ಕೊರೋನಾ ಗ್ರಹಣ ಹಿಡಿದಂತಾಗಿದೆ.
ನಗರದ ಗಾಂಧಿನಗರದ(ಸೆಟ್ಲ್ಮೆಂಟ್)ನಲ್ಲಿ ಈ ಮೊದಲು ಪಾಸಿಟಿವ್ ಆಗಿದ್ದ ವ್ಯಕ್ತಿಯ ಸಂಪರ್ಕದಿಂದ 7 ಜನರಿಗೆ, ತಾಲೂಕಿನ ಕೋಟುಮಚಗಿಯ ಪಾಸಿಟಿವ್ ವೃದ್ಧನ ಸಂಪರ್ಕದಿಂದ 6 ಜನರಿಗೆ, ಶಿರಹಟ್ಟಿ ತಾಲೂಕಿನ ಮಜ್ಜೂರು ತಾಂಡಾದ ಇಬ್ಬರಿಗೆ, ರೋಣ ತಾಲೂಕಿನ ಕುರಡಗಿಯ ಒಬ್ಬರಿಗೆ ಮತ್ತು ಮಹಾರಾಷ್ಟ್ರದಿಂದ ಮರಳಿದ ಇಬ್ಬರಿಗೆ ಭಾನುವಾರ ಪಾಸಿಟಿವ್ ಖಚಿತಪಟ್ಟಿದೆ.
ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 78 ಕ್ಕೇರಿದ್ದು, ಇದರಲ್ಲಿ ಇಬ್ಬರು ಮೃತಪಟ್ಟಿದ್ದಾರೆ. 44 ಜನರು ಗುಣಮುಖರಾಗಿದ್ದು, 39 ಜನರಿಗೆ ಜಿಮ್ಸ್ನ ಕೊವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.