Wednesday, June 29, 2022

Latest Posts

ಗದಗ ಜಿಲ್ಲೆಯಲ್ಲಿ ಗುರುವಾರ 10 ಮಂದಿಗೆ ಕೊರೋನಾ ದೃಢ , ಶತಕ ದಾಟಿದ ಸೋಂಕಿತರ ಸಂಖ್ಯೆ

ಗದಗ : ಜಿಲ್ಲೆಯಲ್ಲಿ ಗುರುವಾರ 10 ಜನರಲ್ಲಿ ಕೊವಿಡ್-19 ಸೋಂಕು ದೃಢ ಪಟ್ಟಿದೆ. ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 104 ಸೋಂಕು ದೃಢಪಟ್ಟಿವೆ. ಅವುಗಳಲ್ಲಿ 2 ವ್ಯಕ್ತಿಗಳು ಮೃತಪಟ್ಟಿದ್ದು 47 ಜನ ಗುಣಮುಖರಾಗಿದ್ದು 55 ಸಕ್ರಿಯ ಪ್ರಕರಣಗಳಿವೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ತಿಳಿಸಿದ್ದಾರೆ.
ರೋಣ ತಾಲ್ಲೂಕಿನ ಇಟಗಿ ಗ್ರಾಮದ 38 ವರ್ಷದ (ಪಿ-9407) ಸೋಂಕಿತರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಿಂದಾಗಿ 8 ಜನಕ್ಕೆ ಸೋಂಕು ದೃಢ ಪಟ್ಟಿದೆ. ಇಟಗಿ ಗ್ರಾಮದ 3 ವರ್ಷದ ಹೆಣ್ಣುಮಗು (ಪಿ-10154) ಹಾಗೂ 37 ವರ್ಷದ (ಪಿ-10155) ಸೋಂಕು ದೃಢವಾಗಿದೆ. ಮುಂಡರಗಿ ಪಟ್ಟಣದ ವಿದ್ಯಾನಗರ ನಿವಾಸಿ 58 ವರ್ಷದ (ಪಿ-10147), ಹುಡ್ಕೊ ಕಾಲೋನಿಯ ಮೂವರಾದ 66 ವರ್ಷದ (ಪಿ-10149), 34 ವರ್ಷದ (ಪಿ-10150), 44 ವರ್ಷದ (ಪಿ-10151), ಗದಗಿನ ಸಿದ್ದರಾಮೇಶ್ವರ ನಗರದ 30 ವರ್ಷದ (ಪಿ-10148) ಹಾಗೂ ಲಕ್ಷ್ಮಣಸಾ ನಗರದ 31 ವರ್ಷದ (ಪಿ-10152) ಸೋಂಕು ದೃಢವಾಗಿದೆ.
ವಿಜಾಪುರ ಜಿಲ್ಲಾ ಪ್ರವಾಸದಿಂದಾಗಿ 16 ವರ್ಷದ (ಪಿ-10146) ಹಾಗೂ ಮಹಾರಾಷ್ಟ್ರ ರಾಜ್ಯದಿಂದ ಆಗಮಿಸಿದ 9 ವರ್ಷದ ಮಹಿಳೆ (ಪಿ-10153) ಇವರಿಗೆ ಸೋಂಕು ಇರುವುದು ದೃಢವಾಗಿದೆ.
ಇವರೆಲ್ಲರಿಗೂ ನಗರದ ನಿಗದಿತ ಜಿಮ್ಸ ಕೊವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss