Thursday, August 18, 2022

Latest Posts

ಗದಗ ಜಿಲ್ಲೆಯಲ್ಲಿ ಮತ್ತೆ ನಾಲ್ವರಿಗೆ ಪಾಸಿಟಿವ್ ಪತ್ತೆ, ಸೋಂಕಿತರ ಸಂಖ್ಯೆ 53 ಕ್ಕೆ ಏರಿಕೆ

ಗದಗ : ಜಿಲ್ಲೆಯಲ್ಲಿ ಮಂಗಳವಾರ 4 ಜನರಿಗೆ ಕೊರೋನಾ ಸೋಂಕು ಇರುವುದು ದೃಡಪಟ್ಟಿದ್ದು ಇದರಿಂದ ಒಟ್ಟು ಸೋಂಕಿತರ ಸಂಖ್ಯೆ 53 ಕ್ಕೆ ಏರಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ.
ಮಹಾರಾಷ್ಟ್ರದಿಂದ ಸ್ಥಳೀಯ ಗಾಂಧಿನಗರ (ಸೆಟ್ಲಮೆಂಟ್)ಕ್ಕೆ ಆಗಮಿಸಿದ 26 ವರ್ಷದ ಮಹಿಳೆ(ಪಿ-7386), 11 ವರ್ಷದ ಬಾಲಕಿ (ಪಿ-7387), ಮೂರು ವರ್ಷದ ಗಂಡು ಮಗು (ಪಿ-7388) ಹಾಗೂ ತಾಲ್ಲೂಕಿನ ಕೋಟುಮಚಗಿಯ 58 ವರ್ಷದ (ಪಿ-7389) ವೃದ್ದನಿಗೆ ಸೋಂಕು ಇರುವುದು ದೃಡಪಟ್ಟಿದೆ.
ಗಾಂಧಿನಗರ(ಸೆಟ್ಲ್‌ಮೆಂಟ್)ನ ಮೂವರು ಇದೇ ಜೂ. 14 ರಂದು ಮಹಾರಾಷ್ಟ್ರದಿಂದ ರೈಲು ಮೂಲಕ ನಗರಕ್ಕೆ ಆಗಮಿಸಿ ಕಡ್ಡಾಯ ಅವಧಿಯ ಪ್ರತ್ಯೇಕ ನಿಗಾದಲ್ಲಿದ್ದರು. ಕೋಟುಮಚಗಿಯ ವೃದ್ದನಿಗೆ ಉಸಿರಾಟದ ತೊಂದರೆ ಇದ್ದು ಅವರನ್ನು ಜಿಲ್ಲಾಸ್ಪತ್ರೆಯಲ್ಲಿ ಪರೀಕ್ಷೆ ಮಾಡಿದಾಗ ಸೋಂಕು ತಗುಲಿರುವುದು ದೃಡಪಟ್ಟಿದೆ. ಎಲ್ಲರನ್ನು ಜಿಮ್ಸ್‌ನ ನಿಗದಿತ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇವರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿರುವರನ್ನು ಪತ್ತೆ ಹಚ್ಚುವ ಕಾರ್ಯ ನಡೆಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!