Wednesday, June 29, 2022

Latest Posts

ಗದಗ ಜಿಲ್ಲೆಯಲ್ಲಿ ಮತ್ತೆ 9 ಕೊರೋನಾ ಪಾಸಿಟಿವ್ ದೃಢ, 88 ಕ್ಕೆರಿದ ಸೋಂಕಿತರು

ಗದಗ: ಜಿಲ್ಲೆಯಲ್ಲಿ ಮಂಗಳವಾರ ಮತ್ತೆ 9 ಜನರಲ್ಲಿ ಕೊವಿಡ್-19 ಸೋಂಕು ಇರುವುದು ದೃಢ ಪಟ್ಟಿದೆ. ಇದರಿಂದ ಜಿಲ್ಲೆಯಲ್ಲಿ ಈವರೆಗೆ ಸೋಂಕಿತರ ಸಂಖ್ಯೆ 88 ಕ್ಕೆ ಏರಿದೆ ಅವುಗಳಲ್ಲಿ 2 ವ್ಯಕ್ತಿಗಳು ಮೃತಪಟ್ಟಿದ್ದು 44 ಜನ ಗುಣಮುಖರಾಗಿದ್ದು, 42 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ತಿಳಿಸಿದ್ದಾರೆ.
ಧಾರವಾಡ ಜಿಲ್ಲೆಯ ಮೊರಬ ಗ್ರಾಮದ (ಪಿ-8289) ಹಾಗೂ (ಪಿ-8290) ರ ಸೋಂಕಿತರ ಸಂಪರ್ಕದಿಂದಾಗಿ ಗದಗ ತಾಲ್ಲೂಕಿನ ಹೊಂಬಳ ಗ್ರಾಮದ 32 ವರ್ಷದ ಮಹಿಳೆ (ಪಿ-9403) ಹಾಗೂ 38 ವರ್ಷದ ಮಹಿಳೆ (ಪಿ-9404) ಇಬ್ಬರಿಗೆ ಸೋಂಕು ಇರುವುದು ದೃಢಪಟ್ಟಿದೆ.
ಅದೇರೀತಿ ಹರ್ತಿ ಗ್ರಾಮದ (ಪಿ-7832) ಸೋಂಕಿತ ಸಂಪರ್ಕದಿಂದಾಗಿ ಹೊಸೂರಿನ 65 ವರ್ಷದ ಮಹಿಳೆ (ಪಿ-9406) ಗೆ ಹಾಗೂ (ಪಿ-8725) ಸೋಂಕಿತ ಸಂಪರ್ಕದಿಂದಾಗಿ ನಗರದ 25 ವರ್ಷದ ಮಹಿಳೆ (ಪಿ-9405) ಸೋಂಕು ದೃಢಪಟ್ಟಿದೆ. ಮಲ್ಲಸಮುದ್ರದ 35 ವರ್ಷದ ಪುರುಷ (ಪಿ-9402) ಸೋಂಕಿನ ಕುರಿತು ಪತ್ತೆ ಹಚ್ಚಲಾಗುತ್ತಿದೆ. ಹಾಗೂ ರೋಣದ 33 ವರ್ಷದ ಪುರುಷ (ಪಿ-9410) ಇವರಿಗೆ ಅಂತರ್ ಜಿಲ್ಲಾ ಪ್ರಯಾಣದಿಂದಾಗಿ ಸೋಂಕು ಹರಡಿರುವುದು ದೃಢಪಟ್ಟಿದೆ.
ಇಟಗಿ ಗ್ರಾಮದ 38 ವರ್ಷದ ಪುರುಷ (ಪಿ-9407) ಅಂತರ್ ಜಿಲ್ಲಾ ಪ್ರಯಾಣದಿಂದಾಗಿ ಸೋಂಕು ದೃಡಪಟ್ಟಿದ್ದು, ಇವರ ಸಂಪರ್ಕದಿಂದ 28 ವರ್ಷದ ಪುರುಷ (ಪಿ-9409) ಹಾಗೂ 32 ವರ್ಷದ ಮಹಿಳೆ (ಪಿ-9408) ಇವರಿಗೆ ಕೊವಿಡ್-19 ಸೋಂಕು ದೃಢಪಟ್ಟಿದೆ. ಇವರೆಲ್ಲರಿಗೂ ಗದಗ ನಿಗದಿತ ಜಿಮ್ಸ ಕೊವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss