ಗದಗ : ಜಿಲ್ಲೆಯಲ್ಲಿ ಮತ್ತೆ 100 ಜನರಿಗೆ ಕೋವಿಡ್-19 ಸೋಂಕು ಇರುವುದು ದೃಢಪಟ್ಟಿರುವದರಿಂದ ಒಟ್ಟು ಸೋಂಕಿತರ ಸಂಖ್ಯೆ 1668 ಕ್ಕೆ ಏರಿದೆ. ಇನ್ನೂ 213 ಜನರ ವರದಿ ಬರಲು ಬಾಕಿ ಇದೆ. ಇಲ್ಲಿಯ ವರೆಗೆ ಕೋವಿಡ್ನಿಂದ 39 ಜನರು ಮೃತಪಟ್ಟಿದ್ದು. ಜು.3 ರಂದು 40 ಜನರು ಸೇರಿದಂತೆ 580 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ನಿಗದಿತ ಆಸ್ಪತ್ರೆಯಲ್ಲಿ 1049 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಗದಗ-32, ಮುಂಡರಗಿ-11,ನರಗುಂದ-24, ರೋಣ-27,ಶಿರಹಟ್ಟಿ -05 ಜನರಿಗೆ ಸೋಮವಾರ ಸೋಂಕು ಇರುವುದು ದೃಢ ಪಟ್ಟಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.