ಗದಗ : ಜಿಲ್ಲೆಯಲ್ಲಿ ಅ.6 ರಂದು ಕೋವಿಡ್-19 ಸೋಂಕಿನಿಂದ ಮತ್ತೆ 124 ಪ್ರಕರಣಗಳು ದೃಡಪಟ್ಟಿದ್ದು ಇದರಿಂದ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1966 ಕ್ಕೇ ಏರಿದೆ. ಇವರೆಗೆ 43 ಜನರು ಮೃತಪಟ್ಟಿದ್ದಾರೆ. ಅ.6 ರಂದು 152 ಜನರು ಸೇರಿದಂತೆ ಒಟ್ಟು 893 ಜನರು ಗುಣಮುಖರಾಗಿದ್ದಾರೆ. 1030 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ 556 ಜನರ ವರದಿ ಬರಲು ಬಾಕಿಯಿದೆ.
ಗದಗ-54, ಮುಂಡರಗಿ-25, ನರಗುಂದ-15, ರೋಣ-10 ಹಾಗೂ ಶಿರಹಟ್ಟಿ ತಾಲ್ಲೂಕಿನಲ್ಲಿ 20 ಜನರು ಸೋಂಕಿತರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.