ಗದಗ : ಜಿಲ್ಲೆಯಲ್ಲಿ ಅ.18 ರಂದು 186 ಜನರಿಗೆ ಕೋವಿಡ್-19 ಜನರಿಗೆ ಸೋಂಕು ಇರುವುದು ದೃಢಪಟ್ಟಿದೆ.ಇದರಿಂದ ಜಿಲ್ಲೆಯಲ್ಲಿ ಇವರೆಗಿನ ಒಟ್ಟು ಸೋಂಕಿತರ ಸಂಖ್ಯೆ 3341 ಕ್ಕೆ ಏರಿದೆ. ಮಂಗಳವಾರ ಈರ್ವರು ಸೇರಿದಂತೆ ಒಟ್ಟು 59 ಜನರು ಮೃತಪಟ್ಟಿದ್ದಾರೆ. 206 ಜನರು ಸೇರಿದಂತೆ 2138 ಜನರು ಗುಣಮುಖರಾಗಿದ್ದಾರೆ. 1144 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಲ್ಲದೆ, ಅ.18 ರಂದು ಗದಗ-92,ಮುಂಡರಗಿ-21,ನರಗುಂದ-29, ರೋಣ-29 ,ಶಿರಹಟ್ಟಿ-12 ಹಾಗೂ ಹೊರಜಿಲ್ಲೆಯ ಮೂವರು ಸೇರಿದಂತೆ ಒಟ್ಟು 186 ಜನರಿಗೆ ಸೋಂಕು ದೃಢ ಪಟ್ಟಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.