Wednesday, August 10, 2022

Latest Posts

ಗದಗ ಜಿಲ್ಲೆಯಲ್ಲಿ 2 ಕೋವಿಡ್-19 ಪ್ರಕರಣ ಪತ್ತೆ, ಸೋಂಕಿತರ ಸಂಖ್ಯೆ 60ಕ್ಕೆ ಏರಿಕೆ

ಗದಗ: ತಾಲೂಕಿನ ಹರ್ತಿ ಗ್ರಾಮದ 81 ವರ್ಷದ ವೃದ್ದ ಹಾಗೂ 24 ವರ್ಷದ ಯುವಕನಿಗೆ ಶನಿವಾರ ಕೋವಿಡ್-19 ಸೋಂಕು ಇರುವುದು ದೃಢಪಟ್ಟಿರುತ್ತದೆ. ಇವರುಗಳಿಗೆ 45 ವರ್ಷದ ಪುರುಷ ಪಿ-6255 ಇವರ ಸಂಪರ್ಕದಿಂದ ಸೋಂಕು ಹರಡಿರುತ್ತದೆ. ಇದರಿಂದ ಇವರೆಗೆ ಸೋಂಕಿತರ ಸಂಖ್ಯೆ 60 ಕ್ಕೆ ಏರಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ.
ಪಿ-6255 ಇವರು ಧಾರವಾಡದಿಂದ ಹರ್ತಿ ಗ್ರಾಮದ ತಮ್ಮ ಸಂಬಂಧಿಕರ ಮನೆಗೆ ಜೂ.6 ರಂದು ಆಗಮಿಸಿ ಅದೇ ದಿನ ಮರಳಿ ಧಾರವಾಡಕ್ಕೆ ಪ್ರಯಾಣಿಸಿರುತ್ತಾರೆ. ಜೂ..12 ರಂದು ಪಿ-6255 ಅವರಲ್ಲಿ ಸೋಂಕು ದೃಢಪಟ್ಟಿದ್ದು ಇವರ ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ಗುರುತಿಸಿ ನಿಗಾಹದಲ್ಲಿರಿಸಿ ಅವರ ಗಂಟಲು ದ್ರವದ ಮಾದರಿ ಪರೀಕ್ಷೆಗೆ ಒಳಪಡಿಸಿದಾಗ ಇಬ್ಬರಿಗೆ ಸೋಂಕು ದೃಢಪಟ್ಟಿರುತ್ತದೆ. ಇಬ್ಬರು ಸೋಂಕಿತರನ್ನು ಜಿಲ್ಲೆಯ ನಿಗದಿತ ಕೋವಿಡ್-19ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss