ಗದಗ ಜಿಲ್ಲೆಯಲ್ಲಿ 4 ಮಂದಿಗೆ ಕೊರೋನಾ ದೃಢ, ಸೋಂಕಿತರ ಸಂಖ್ಯೆ 174 ಏರಿಕೆ

0
187

ಗದಗ: ಜಿಲ್ಲೆಯಲ್ಲಿ ಸೋಮವಾರ 4 ಜನರಲ್ಲಿ ಕೊವಿಡ್-19 ಸೋಂಕು ದೃಢ ಪಟ್ಟಿದೆ. ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 174 ಸೋಂಕು ದೃಢಪಟ್ಟಿವೆ. ಅವುಗಳಲ್ಲಿ 3 ವ್ಯಕ್ತಿಗಳು ಮೃತಪಟ್ಟಿದ್ದು 53 ಜನ ಗುಣಮುಖರಾಗಿದ್ದು 118 ಕೊವಿಡ್-19 ಸೋಂಕಿನ ಸಕ್ರಿಯ ಪ್ರಕರಣಗಳಿವೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ.
ಇನ್‍ಪ್ಲೂಯೆಂಜಾ ರೋಗ ಲಕ್ಷಣಗಳಿರುವ ಶಿರಹಟ್ಟಿ ಪಟ್ಟಣದ 10 ವರ್ಷದ ಬಾಲಕಿ (ಪಿ-13269), ಗದುಗಿನ ತೇಜಾನಗರದ 61 ವರ್ಷದ (ಪಿ-13270), ಕುರ್ತಕೋಟಿ ಗ್ರಾಮದ 36 ವರ್ಷದ (ಪಿ-13271) ಸೋಂಕು ದೃಢವಾಗಿದೆ. ಮಹಾರಾಷ್ಟ್ರ ರಾಜ್ಯದಿಂದ ಆಗಮಿಸಿದ ಗದುಗಿನ ಕೆಎಲ್‍ಇ ಕಾಲೇಜ್ ಹತ್ತಿರದ ನಿವಾಸಿ 21 ವರ್ಷದ (ಪಿ-13272) ಇವರಿಗೆ ಸೋಂಕು ಇರುವುದು ದೃಢವಾಗಿದೆ.
ಇವರೆಲ್ಲರಿಗೂ ಗದಗ ನಿಗದಿತ ಜಿಮ್ಸ ಕೊವಿಡ್-19 ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here