spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, September 23, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಗದ್ದೆಯಲ್ಲಿ ಭತ್ತದ ಪೈರು ಹಿಡಿದು ನಿಂತು ಫೋಟೋ ತೆಗೆಸಿಕೊಂಡರೆ ರೈತನಾಗಲ್ಲ: ಹೆಚ್’ಡಿಕೆಗೆ ಜಿ.ಟಿ.ದೇವೇಗೌಡ ಟಾಂಗ್

- Advertisement -Nitte

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ವರದಿ, ಮೈಸೂರು:

ಯಾವುದೋ ಜಮೀನಿನಲ್ಲಿ ಭತ್ತ ನಾಟಿ ಮಾಡುವಂತೆ ನಿಂತು ಫೋಟೋ ತೆಗೆಯಿಸಿಕೊಂಡರೆ ರೈತನಾಗುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಗೆ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಟಾಂಗ್ ನೀಡಿದರು.
ಭಾನುವಾರ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಹೊಲ ಉತ್ತಿದ್ದೇನೆ, ನಾಟಿ ಮಾಡಿ, ಬೆಳೆಗಳನ್ನು ಬೆಳೆದಿದ್ದೇನೆ, ನಾನು ನಿಜವಾದ ರೈತ, ಯಾರದ್ದೋ ಜಮೀನಿನಲ್ಲಿ ಕೆಲ ಹೊತ್ತು ಭತ್ತದ ಫೈರನ್ನು ಹಿಡಿದು ನಾಟಿ ಮಾಡಿ, ಪೋಟೋ ತೆಗೆಯಿಸಿಕೊಂಡರೆ ರೈತನಾಗಲು ಸಾಧ್ಯವಿಲ್ಲ ಎಂದು ಟಕ್ಕರ್ ನೀಡಿದರು.
ಈ ಹಿಂದೆಯೇ ಹೆಚ್.ಡಿ.ಕುಮಾರಸ್ವಾಮಿ ಅವರು ಮೈಸೂರಿಗೆ ಬಂದು ಜಿ.ಟಿ.ದೇವೇಗೌಡರನ್ನು ಪಕ್ಷದಿಂದ ಉಚ್ಚಾಟನೆ ಮಾಡುತ್ತೇನೆ, ಅವರನ್ನು ಮತ್ತೆಂದು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಅವರಿಗೂ ಜಿ.ಟಿ.ದೇವೇಗೌಡರಿಗೆ ವಯಸ್ಸಾಗಿದೆ ಎಂಬುದು ಗೊತ್ತಿದೆ. ಹಾಗಾಗಿ ಯುವಕರನ್ನು ಕಟ್ಟಿಕೊಂಡು ಪಕ್ಷ ಬೆಳೆಸಬೇಕು ಎಂದು ಓಡಾಡುತ್ತಿದ್ದಾರೆ. ಹಳಬರಿಗೆಲ್ಲಾ ಪಕ್ಷದ ಬಾಗಿಲು ತೆರೆದಿದೆ, ಹೋಗುವವರು ಹೋಗಬಹುದು ಎಂದು ಹೇಳಿದ್ದಾರೆ. ನಾನು ಹೇಳಬೇಕಾದನ್ನೆಲ್ಲಾ ಈಗಾಗಲೇ ಹೇಳಿದ್ದೇನೆ, ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಒಳ್ಳೆಯದಾಗಲಿ ಎಂದು ವ್ಯಂಗ್ಯವಾಗಿ ಹೇಳಿದರು.
ಜೆಡಿಎಸ್ ವರಿಷ್ಠರಾದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೆ ಅಪಾರವಾದ ಅನುಭವಿದೆ. ಅವರ ರಾಜಕೀಯ ಗರಡಿಯಲ್ಲಿ ನಾನು, ಸಿದ್ದರಾಮಯ್ಯ, ಬಸವರಾಜ ಬೊಮ್ಮಾಯಿ ಎಲ್ಲರೂ ಪಳಗಿ ಬಂದಿದ್ದೇವೆ. ಪಕ್ಷವನ್ನು ಕಟ್ಟಲು ಯಾರು ಏನೆಲ್ಲಾ ಮಾಡಿದ್ದಾರೆ ಎಂಬುದು ಅವರಿಗೆ ಗೊತ್ತಿದೆ. ಹಾಗಾಗಿ ಅವರು ಪಕ್ಷದಲ್ಲಿಯೇ ನನ್ನಂತಹವರನ್ನು ಉಳಿಸಿಕೊಳ್ಳುವ ಮಾತನಾಡುತ್ತಿದ್ದಾರೆ. ಆ ನಿಟ್ಟಿನಲ್ಲಿ ಪ್ರಯತ್ನವನ್ನೂ ಮಾಡುತ್ತಿದ್ದಾರೆ. ಆದರೆ ಅವರಿಗೆ ಏನು ಹೇಳಬೇಕೋ, ಅದನ್ನೇಲ್ಲಾ ನಾನು ಈಗಾಗಲೇ ಹೇಳಿ ಆಗಿದೆ ಎಂದರು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss