Thursday, August 11, 2022

Latest Posts

ಗನ್ ಸಹಿತ ವಿಮಾನ ಪ್ರಯಾಣಕ್ಕೆ ಯತ್ನಿಸಿದ ಮಾಜಿ ಸಚಿವ ಆನಂದ ಆಸ್ನೋಟಿಕರ್

ದೇವನಹಳ್ಳಿ(ಬೆಂ. ಗ್ರಾಮಾಂತರ): ಅನುಮತಿ ಇಲ್ಲದೇ ಗನ್ ಸಹಿತ ವಿಮಾನ ಪ್ರಯಾಣಕ್ಕೆ ಯತ್ನಿಸಿದ ಮಾಜಿ ಸಚಿವ ಆನಂದ ಆಸ್ನೋಟಿಕರ್ ಅವರನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಐಎಸ್ಎಫ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಮಾಜಿ ಸಚಿವ ಆನಂದ್​ ಅಸ್ನೋಟಿಕರ್​ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 11 ಗಂಟೆಯ ವಿಮಾನದಲ್ಲಿ ಗೋವಾಗೆ ತೆರಳಿದ್ದು, ಪ್ರಯಾಣಿಕರನ್ನು ಭದ್ರತಾ ಸಿಬ್ಬಂದಿ ತಪಾಸಣೆ ಮಾಡುವಾಗ ಅಸ್ನೋಟಿಕರ್​ ಲಗೇಜ್​ನಲ್ಲಿ ಪಿಸ್ತೂಲ್​ ಪತ್ತೆಯಾಗಿ ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು.
ಬಳಿಕ ವಿಚಾರಣೆ ನಡೆಸಿದಾಗ ಪಿಸ್ತೂಲ್​ಗೆ ಪರವಾನಿಗೆ ಪಡೆದಿರುವ ಮಾಹಿತಿ ತಿಳಿದು ಬಂದಿದೆ.ಅಸ್ನೋಟಿಕರ್​ ಪ್ರಯಾಣದ ವೇಳೆ ಪಿಸ್ತೂಲ್​ ಪರವಾನಿಗೆಗೆ ಸಂಬಂಧಪಟ್ಟ ದಾಖಲೆ ಪತ್ರಗಳನ್ನು ತೆಗೆದುಕೊಂಡು ಹೋಗದ ಹಿನ್ನೆಲೆ ಪೊಲೀಸರು ತಮ್ಮ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.
ಬಳಿಕ ಪಿಸ್ತೂಲ್ ಪರವಾನಿಗೆ ದಾಖಲೆ ಪತ್ರಗಳನ್ನ ಠಾಣೆಗೆ ತರಿಸಿಕೊಂಡು ಅಸ್ನೋಟಿಕರ್ ಪೊಲೀಸರಿಗೆ ನೀಡಿದ್ದಾರೆ. ದಾಖಲೆ ಪತ್ರ ಪರಿಶೀಲನೆಯ ನಂತರ ಅಸ್ನೋಟಿಕರ್​ ಅವರನ್ನು ಬಿಟ್ಟು ಕಳುಹಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss