ಗರಿಕೆ ಹುಲ್ಲು ಗಣಪತಿ ಪ್ರಿಯವಾದದ್ದು. ಗಣಪತಿಯ ಪೂಜಾ ಕಾರ್ಯಗಳಿಗೆ ಗರಿಕೆ ಹುಲ್ಲು ಬೇಕೆ ಬೇಕು. ಇದು ಕೇವಲ ದೇವರ ಕಾರ್ಯಕ್ಕೆ ಮಾತ್ರವಲ್ಲ. ಆರೋಗ್ಯಕರವಾಗಿಯೂ ಬಹಳ ಉಪಯೋಗಕಾರಿಯಾಗಿದೆ. ಆಯುರ್ವೇದ ಔಷಧಗಳ ತಯಾರಿಕೆಯಲ್ಲಿ ಗರಿಕೆ ಹುಲ್ಲಿಗೆ ಮೊದಲ ಸ್ಥಾನ ನೀಡಲಾಗುತ್ತದೆ. ಗರಿಕೆ ಹುಲ್ಲಿಗೆ ಹತ್ತಾರು ಕಾಯಿಲೆಗಳನ್ನು ಕಡಿಮೆ ಮಾಡುವ ಶಕ್ತಿ ಇದೆ. ಗರಿಕೆ ಹುಲ್ಲಿನ ಉಪಯೋಗ…
ಮುಟ್ಟಿನ ಹೊಟ್ಟೆನೋವು:
ಮುಟ್ಟಿನ ದಿನಗಳಲ್ಲಿ ಬರುವ ಹೊಟ್ಟೆನೋವಿಗೆ ಗರಿಕೆ ಹುಲ್ಲಿನ ರಸವನ್ನು ಒಂದು ಚಮಚ ಆಗುವಷ್ಟು ತೆಗೆದು ಅದನ್ನು ಜೇನು ತುಪ್ಪದೊಂದಿಗೆ ಸೇರಿಸಿಕೊಂಡು ನೆಕ್ಕಿದರೆ ಹೊಟ್ಟೆ ನೋವು ಬೇಗ ಕಡಿಮೆ ಆಗುತ್ತದೆ.
ಮೂಗಿನಲ್ಲಿ ರಕ್ತ:
ಮೂಗಿನಲ್ಲಿ ರಕ್ತ ಸೋರುತ್ತಿದರೆ ತಕ್ಷಣ ಗರಿಕೆ ಹುಲ್ಲಿನ ರಸವನ್ನು ತೆಗದು ಮೂಗಿಗೆ ಹಾಕಬೇಕು. ಹೀಗೆ ಮಾಡದರೆ ಮೂಗಿನಲ್ಲಿ ಸೋರುತ್ತಿರುವ ರಕ್ತ ನಿಲ್ಲುತ್ತದೆ.
ಹೊಟ್ಟು ನಿವಾರನೆ:
ತಲೆಯಲ್ಲಿ ಬಹಳ ಹೊಟ್ಟಾಗಿ ತಲೆ ಕೆರೆದುಕೊಳ್ಳುವಂತಾಗಿದ್ದರೆ ಗರಿಕೆ ಹುಲ್ಲಿನ ರಸವನ್ನು ತೆಗೆದು ಅದನ್ನು ಮೊಸರಿಗೆ ಸೇರಿಸಿಕೊಂಡು ಹಚ್ಚಿಕೊಳ್ಳುವುದರಿಂದ ಹೊಟ್ಟು ನಿವಾರಣೆಯಾಗುತ್ತದೆ. ಮತ್ತು ಕೂದಲು ಉದುರುವುದು ನಿಲ್ಲುತ್ತದೆ.
ಉರಿ ಮೂತ್ರ:
ಉರಿ ಮೂತ್ರದ ಸಮಸ್ಯೆ ಇರುವವರು ಗರಿಕೆ ರಸವನ್ನು ತೆಗೆದು ಅದನ್ನು ಒಂದು ಕಪ್ ನೀರಿಗೆ ಹಾಕಿಕೊಂಡು ಕುಡಿದರೆ ಉರಿ ಮೂತ್ರ ನಿವಾರಣೆಯಾಗುತ್ತದೆ. ಮೂತ್ರದ ಸೋಂಕು ನಿವಾರಣೆಯಾಗುತ್ತದೆ.
ಉಗುರು ಸುತ್ತು:
ಉಗುರು ಸುತ್ತು ಎಂದರೆ ಉಗುರಿನ ಸುತ್ತ ಇರುವ ಚರ್ಮ ಉಬ್ಬುತ್ತದೆ. ಕೀವಾಗುತ್ತದೆ. ಬಹಳ ನೋವಾಗುತ್ತದೆ. ಆಗ ಸುಣ್ಣ ಮತ್ತು ಬೆಲ್ಲ ಹಾಗೂ ಗರಿಕೆ ಹುಲ್ಲಿನ ರಸವನ್ನು ಮಿಕ್ಸ್ ಮಾಡಿಕೊಂಡು ಉಗುರಿಗೆ ಹಚ್ಚಿಕೊಳ್ಳಬೇಕು.
ಚಿಕ್ಕ ಮಕ್ಕಳ ಜ್ವರ:
ಚಿಕ್ಕ ಮಕ್ಕಳಿಗೆ ಜ್ವರ ಬಂದಾಗ ಗರಿಕೆ ಹುಲ್ಲು, ತುಳಸಿ, ಕುತ್ತಂಬರಿ ಕಾಳು. ಇವಿಷ್ಟನ್ನೂ ನೀರಿನಲ್ಲಿ ಹಾಕಿ ಕುದಿಸಬೇಕು. ಆನಂತರ ಅದಕ್ಕೆ ಬೆಲ್ಲವನ್ನು ಹಾಕಿಕೊಂಡು ದಿನದಲ್ಲಿ ಮೂರು ಹೊತ್ತು ಕುಡಿಸಿದರೆ ಚಿಕ್ಕ ಮಕ್ಕಳಿಗೆ ಜ್ವರ ಕಡಿಮೆ ಆಗುತ್ತದೆ.