‘ಹೊಸದಿಗಂತ ಆನ್ಲೈನ್ ಡೆಸ್ಕ್:
ಗಾಯಕಿ ನೇಹಾ ಕಕ್ಕರ್ ‘ಗರ್ಭವತಿ’ ಸುದ್ದಿಯ ಹಿಂದಿನ ಸತ್ಯಾಂಶವನ್ನು ಖುದ್ದು ಆಕೆಯೇ ಬಹಿರಂಗಪಡಸಿದ್ದಾರೆ.
ಕಳೆದ ಅಕ್ಟೋಬರ್ ತಿಂಗಳಿನಷ್ಟೇ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದ ಕಕ್ಕರ್, ಗಂಡನ ಜತೆ, ಹೊಟ್ಟೆ ಹಿಡಿದುಕೊಂಡಿರುವ ಫೋಟೋ ಹಾಕಿ ಎಲ್ಲರಲ್ಲಿ ಅಚ್ಚರಿ ಮೂಡಿಸಿದ್ದರು. ಶುಕ್ರವಾರ ಫೋಟೋ ಹಾಕುತ್ತಿದ್ದಂತೆ, ಅಭಿಮಾನಿಗಳು ಕಣ್ಣರಳಿಸಿ ನೋಡಲಾರಂಭಿಸಿದ್ದರಲ್ಲದೆ, ಮದುವೆಯಾದ ಎರಡೇ ತಿಂಗಳಲ್ಲಿ ಇಷ್ಟು ದೊಡ್ಡ ಹೊಟ್ಟೆ? ನೇಹಾ ಮದುವೆಗೂ ಮೊದಲೇ ಗರ್ಭವತಿ ಆಗಿದ್ದರೆ? ಏಕಿಷ್ಟು ಅವಸರ? ಹೀಗೆ ಹತ್ತಾರು ಪ್ರಶ್ನೆ ಮುಂದಿಟ್ಟಿದ್ದರು. ಅಭಿಮಾನಿಗಳ ಎಲ್ಲ ಪ್ರಶ್ನೆಗೂ ನೇಹಾ ಇದೀಗ ಉತ್ತರ ಕೊಟ್ಟಿದ್ದು, ನಾನು ನಿಜವಾಗಿಯೂ ಗರ್ಭವತಿ ಅಲ್ಲವೇ ಅಲ್ಲ. ನನ್ನ ಹೊಸ ಆಲ್ಬಂ ಸಾಂಗ್ ’ಕಯಾಲ್ ರಕ್ಯಾ ಕರ್’ ಡಿ.22ರಂದು ಬಿಡುಗಡೆಯಾಗಲಿದೆ. ಆ ಹಾಡಿನಲ್ಲಿ ಗಾಯಕಿ ಗರ್ಭವತಿ ಆಗಿದ್ದಾಳೆ. ಅದೇ ಕಾರಣಕ್ಕೆ ಈ ರೀತಿಯದ್ದೊಂದು ಫೋಟೋ ತೆಗೆಸಿಕೊಂಡಿದ್ದೇನೆ. ಇದು ಪೋಸ್ಟರ್ಗಾಗಿಯೇ ತೆಗೆದ ಚಿತ್ರ ಎಂದು ಹೇಳಿಕೊಂಡಿದ್ದಾರೆ.