ಗರ್ಭಿಣಿಯರು ಆರೋಗ್ಯಕರ ಆಹಾರವನ್ನು ತಿನ್ನುವುದರಿಂದ ತಮ್ಮ ಮತ್ತೊಂದು ಜೀವಕ್ಕೆ ಶಕ್ತಿ ನೀಡುತ್ತದೆ. ಗರ್ಭಿಣಿಯರು ತಿನ್ನುವ ಆಹಾರವನ್ನು ತುಂಬಾ ಎಚ್ಚರಿಕೆಯಿಂದ ಸೇವಿಸಬೇಕು. ಅಂತಹದರಲ್ಲಿ ಗರ್ಭಿಣಿಯರು ಸೇವಿಸಲೇಬಾರದಂತಹ ಕೆಲವೊಂದು ಆಹಾರಗಳಿರುತ್ತದೆ. ಗರ್ಭಿಣಿಯರು ಈ ಪದಾರ್ಥಗಳನ್ನು ತಿನ್ನುವುದರಿಂದ ಗರ್ಭಪಾತವಾಗುವ ಸಾಧ್ಯತೆಗಳಿರುತ್ತದೆ.
ಯಾವ ಆಹಾರಗಳನ್ನು ತಿಂದರೆ ಗರ್ಭಿಣಿಯರಿಗೆ ತೊಂದರೆಯಾಗುತ್ತದೆ ನೋಡಿ:
ಅನಾನಸ್: ಗರ್ಭಧಾರಣೆಯ ಮೊದಲ ತ್ರೈಮಾಸಿಕದಲ್ಲಿ ತಪ್ಪಿಸಲು ಅನಾನಸ್ ಸೇವಿಸುತ್ತಾರೆ. ಇದರಲ್ಲಿನ ಬ್ರೋಮೆಲೈನ್ ಅಂಶವು ಗರ್ಭಪಾತವಾಗುವ ಸಾಧ್ಯತೆ ಇದೆ.
ಹಸಿ ಮಾಂಸ: ಬೇಯಿಸದೆ ಅಥವಾ ಸರಿಯಾಗಿ ಬೇಯದ ಮಾಂಸವನ್ನು ತಿನ್ನುವುದರಿಂದ ಅದರಲ್ಲಿನ ಟೊಕ್ಸೋಪ್ಲಾಸ್ಮಾಸಿಸ್ ಅಂಶವು ಮಗುವಿನ ಆರೋಗ್ಯಕ್ಕೆ ಹಾನಿಯಾಗಲಿದೆ.
ಪಪಾಯ: ಪಪ್ಪಾಯಿಯಲ್ಲಿ ನಿಮ್ಮ ದೇಹಕ್ಕೆ ಅಗತ್ಯವಾದ ಮ್ಯಾಕ್ರೋನ್ಯೂಟ್ರಿಯೆಂಟ್ಸ್ ಮತ್ತು ವಿಟಮಿನ್ ಗಳಿದ್ದರೂ, ದೇಹದಲ್ಲಿ ಉಷ್ಣತೆ ಹೆಚ್ಚಿಸುವ ಹಣ್ಣಾಗಿದೆ. ಇದು ಗರ್ಭಿಣಿಯರಿಗೆ ಒಳ್ಳೆಯದಲ್ಲ.
ಪೀಚ್: ಪೀಚ್ ಹಣ್ಣು ಕೂಡ ಉಷ್ಣತೆ ಹೆಚ್ಚು ಮಾಡುತ್ತದೆ ಇದರಿಂದ ಗರ್ಭಿಣಿಯರಿಗೆ ತೊಂದರೆಯಾಗುತ್ತದೆ.
ಮದ್ಯ: ಗರ್ಭಾವಸ್ಥೆಯಲ್ಲಿರುವವರು ಮೊದಲ ಮೂರು ತಿಂಗಳಾದರೂ ಮದ್ಯ ಸೇವನೆಯನ್ನು ಸಂಪೂರ್ಣ ನಿಲ್ಲಿಸಬೇಕು.
ಕಲ್ಲಂಗಡಿ: ಕಲ್ಲಂಗಡಿ ಹಣ್ಣಿನಲ್ಲಿ ಹೆಚ್ಚು ಸಿಹಿ ಅಂಶವಿದ್ದು, ಇದರಿಂದ ಮಧುಮೇಹ ಸಮಸ್ಯೆ ಬರಬಹುದು.
ಫ್ರೀಜ್ ಆಗಿರುವ ಬೆರ್ರಿ: ದೀರ್ಘಕಾಲ ಫ್ರಿಡ್ಜ್ ನಲ್ಲಿಟ್ಟ ಹಣ್ಣುಗಳನ್ನು ತಿನ್ನುವುದು ಸೂಕ್ತವಲ್ಲ. ತುಂಬಾ ಹೊತ್ತು ತಂಪಾಗಿದ್ದ ಆಹಾರಗಳು ತನ್ನ ಪೌಷ್ಠಿಕಾಂಶಗಳನ್ನು ಕಳೆದುಕೊಂಡಿರುತ್ತದೆ.