Tuesday, January 19, 2021

Latest Posts

ಗರ್ಭ ಬಗೆದು ಕ್ರೂರ ರೀತಿ ಗೃಹಿಣಿಯ ಹತ್ಯೆಗೈದಿದ್ದ ರಾಕ್ಷಸಿಗೆ ಗಲ್ಲು ಖಾಯಂ

ಹೊಸ ದಿಗಂತ ಆನ್‌ಲೈನ್ ಡೆಸ್ಕ್:

ಬರೋಬ್ಬರಿ 70 ವರ್ಷಗಳ ಬಳಿಕ ಅಮೆರಿಕದಲ್ಲಿ ಮಹಿಳೆಯೋರ್ವರಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ.
ಲೀಸಾ ಮಾಂಟಾಗೋಮೇರಿ ಎಂಬ 52 ವರ್ಷದ ಪಾತಕಿ ಮೇಲೆ ಅತ್ಯಂತ ಕ್ರೂರ ರೀತಿಯ ಅಪಹರಣ ಮತ್ತು ಕೊಲೆ ಪ್ರಕರಣ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಈ ಶಿಕ್ಷೆ ಜಾರಿ ಮಾಡಲಾಗಿದೆ. ಈಕೆ 2007ರಲ್ಲಿ ಬಾಬಿ ಜೋ ಸ್ಟಿನ್ನೆಟ್ ಎಂಬ ಎಂಟು ತಿಂಗಳ ಗರ್ಭಿಣಿಯನ್ನು ಅಪಹರಿಸಿದ್ದಲ್ಲದೆ, ಆಕೆಯ ಗರ್ಭ ಸೀಳಿ ಹತ್ಯೆಗೈದಿದ್ದಳು. ಅಚ್ಚರಿ ಎಂದರೆ ಈ ಕೃತ್ಯದಲ್ಲಿ ಬಾಬಿ ಮೃತಪಟ್ಟಿದ್ದರೂ ಆಕೆಯ ಮಗು ಪವಾಡ ಎಂಬಂತೆ ಬದುಕುಳಿದಿತ್ತು.
ಈ ಪ್ರಕರಣದ ವಿಚಾರಣೆ ನಡೆಸಿದ್ದ ಫೆಡರಲ್ ಜ್ಯೂರಿ, ಅವಿರೋಧವಾಗಿ ಲೀಸಾಗೆ ಗಲ್ಲುಶಿಕ್ಷೆ ವಿಧಿಸಲು ಶಿಫಾರಸು ಮಾಡಿತ್ತು. ಇದನ್ನು ಪ್ರಶ್ನಿಸಿ ಲೀಸಾ, ಮಿಸೌರಿ ಜಿಲ್ಲಾ ಕೋರ್ಟ್ ಮೆಟ್ಟಿಲೇರಿದ್ದರೂ ಫಲಕಾರಿಯಾಗಿಲ್ಲ. ಶಿಕ್ಷೆ ಕಾಯಂ ಮಾಡಿರುವುದಾಗಿ ನ್ಯಾಯಾಂಗ ಇಲಾಖೆ ತಿಳಿಸಿದೆ. ಈ ಮೊದಲು ಇಂಡಿಯಾನಾದ ಟೆರ್ರೆ ಹೌಟೆಯಲ್ಲಿರುವ ನ್ಯಾಯಾಂಗ ಇಲಾಖೆ ಕಾರಾಗೃಹದಲ್ಲಿ ಈಕೆಗೆ ಲೇಥಾಲ್ ಇಂಜೆಕ್ಷನ್ ನೀಡಿ ಕೊಲ್ಲಲು ನಿರ್ಧರಿಸಲಾಗಿತ್ತು. ಆದರೆ ಫೆಡರಲ್ ಜ್ಯೂರಿ ಈಕೆಗೆ ಮರಣದಂಡನೆ ಸೂಕ್ತ ಎಂದು ಶಿಫಾರಸು ಮಾಡಿದೆ.

 

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss

error: Content is protected !!