ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಕೆಲವೊಬ್ಬರಿಗೆ ಫಾಸ್ಟ್ ಪುಡ್ ತಿನ್ನುವ ಚಪಲ ಸಿಕ್ಕಾಪಟೆ ಇರುತ್ತದೆ. ಬಾಯಿ ಚಪಲಕ್ಕೆ ಏನು ಬೇಕಾದರೂ ಮಾಡುತ್ತಾರೆ ಎಂಬುದಕ್ಕೆ ರಷ್ಯಾದಲ್ಲಿ ಒಂದು ಘಟನೆ ನಡೆದಿದೆ. ತನ್ನ ಗರ್ಲ್ಫ್ರೆಂಡ್ನ ಫಾಸ್ಟ್ ಫುಡ್ ಬಯಕೆ ತೀರಿಸಲೆಂದು ಬರೋಬ್ಬರಿ 710 ಮೈಲಿ ಪ್ರಯಾಣಿಸಿದ್ದಾನೆ ಈ ಪ್ರೇಮಿ.
ಈ ಪ್ರೇಮಿಯ ಹೆಸರು ವಿಕ್ಟರ್ ಮಾರ್ಟಿನೋವ್(33). ಈ ಪುಣ್ಯಾತ್ಮ ಮಾಡಿದ್ದೇನು ಗೊತ್ತಾ? ತನ್ನ ಹುಡುಗಿ ಅಲುಷ್ಟಾನೊಂದಿಗೆ ಕ್ರೈಮಿಯಾದ ರೆಸಾರ್ಟ್ ನಲ್ಲಿ ತನ್ನ ರಜೆ ದಿನಗಳನ್ನಾ ಕಳೆಯುತ್ತಿದ್ದ. ಈ ಪ್ರದೇಶದಲ್ಲಿ ಪಾಶ್ಚಿಮಾತ್ಯ ಕಂಪನಿಗಳಿಗೆ ನಿರ್ಬಂಧನ ವಿರುವುದರಿಂದ ಯಾವೊಂದು ಮೆಕ್ಡೊನಾಲ್ಡ್ಸ್ಕೂಡ ಇಲ್ಲಿ ಕಾಣಸಿಗುವುದಿಲ್ಲ. ಆದರೆ ಈ ಜೋಡಿ ಹಕ್ಕಿಗಳಿಗೆ ಮೆಕ್ಡೊನಾಲ್ಡ್ಸ್ ನಲ್ಲಿ ಬರ್ಗರ್, ಫ್ರೈಸ್ ತಿನ್ನಬೇಕೆಂಬ ಆಸೆ ಹುಟ್ಟಿದೆ.
ಈ ಹಿನ್ನಲೆಯಲ್ಲಿ ವಿಕ್ಟರ್ ಮಾರ್ಟಿನೋವ್ ಹೆಲಿಕಾಫ್ಟರ್ ಹತ್ತಿದೆ 720 ಮೈಲು ದೂರದಿಲ್ಲಿರುವ ಕ್ರಾಸ್ನೋಡರ್ನಗೆ ಹೋಗಿ ಅಲ್ಲಿಂದ ಬರ್ಗರ್, ಫ್ರೈಸ್ ಮತ್ತು ಮಿಲ್ಕ್ಶೇಕ್ ತೆಗೆದುಕೊಂಡು ಕೆಲವೇ ಗಂಟೆಗಳಲ್ಲಿ ಮತ್ತೆ ತನ್ನ ಹುಡುಗಿ ಇದ್ದಲ್ಲಿಗೆ ಹೋಗಿ ಇಬ್ಬರು ಫಾಸ್ಟ್ ಪುಡ್ ಸವಿದಿದ್ದಾರೆ. ಇವಿಷ್ಟೆ ತಿಂಡಿ ತರಲು ಅವನು ಖರ್ಚು ಮಾಡಿದ ಹಣ 62,700 ರೂಪಾಯಿ.