Thursday, July 7, 2022

Latest Posts

ಗಲಬೆಗೆ ಕಾಂಗ್ರೆಸ್ ಕುಮ್ಮಕ್ಕು ಇದೆ ಎಂದು ಹೇಳುವುದು ಸರಿಯಲ್ಲ: ಶಾಸಕ ಎಚ್.ಕೆ.ಪಾಟೀಲ್

ಗದಗ: ಸರ್ಕಾರದಲ್ಲಿದ್ದವರು ಗಲಬೆಕೋರರ ವಿರುದ್ದ ತನಿಖೆಗೆ ಏರ್ಪಾಡು ಮಾಡಬೇಕು. ಹೈಕೋರ್ಟ್ ಜಡ್ಜ್ ಕಡೆಯಿಂದ ತನಿಖೆ ಮಾಡಿಸಿ ನಂತರ ಕಾರಣರಾದವರ ಮೇಲೆ ಉಗ್ರ ಕಾನೂನು ಕ್ರಮ ತಗೆದುಕೊಳ್ಳಿ. ಅದನ್ನು ಬಿಟ್ಟು ಕಾಂಗ್ರೆಸ್ ಶಾಸಕ ಹೊಡಿಸಿಕೊಂಡರು, ಕಾಂಗ್ರೆಸ್ ಕುಮ್ಮಕ್ಕು ಇದೆ ಎಂದು ಹೇಳುವುದು ಎಷ್ಟು ಸರಿ? ಎಂದು ಬಿಜೆಪಿ ವಿರುದ್ದ ಶಾಸಕ ಎಚ್.ಕೆ.ಪಾಟೀಲ್ ಕಿಡಿಕಾರಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬೆಂಗಳೂರು ಗಲಬೆಗೆ ಕಾಂಗ್ರೆಸ್ ಕುಮ್ಮಕ್ಕು ಇದೆ ಎಂದು ಜಗದೀಶ ಶೆಟ್ಟರ ಅವರು ಹೇಳುವುದು ಸರಿಯಲ್ಲ. ಕಾಂಗ್ರೆಸ್ ಪಕ್ಷವು ಇಂತಹ ಘಟನೆಗಳಲ್ಲಿ ಕೈ ಹಾಕುವುದಿಲ್ಲ. ಇಂತಹ ಹೆಜ್ಜೆಗಳನ್ನು ಯಾವಾಗಲೂ ತುಳಿಯುವದಿಲ್ಲ ಎಂದು ಸಮರ್ಥಿಸಿಕೊಂಡ  ಅವರು  ಬಿಜೆಪಿಯವರಲ್ಲಿಯೇ ಸಾಕಷ್ಟು ವೈಫಲ್ಯತೆಗಳಿವೆ. ಸರ್ಕಾರ ಕೊರೋನಾ ನಿಯಂತ್ರಣದಲ್ಲಿ ವಿಫಲಾಗಿದೆ. ರೈತರಿಗೆ ಯೂರಿಯಾ ಗೊಬ್ಬರ ಕೊಡದಷ್ಟು ಅಶಕ್ತರಾಗಿದ್ದಾರೆ. ಅವರ ಪಕ್ಷದಲ್ಲಿರುವ ವೈಮನಸ್ಸುಗಳು ಸಾಕಷ್ಟಿವೆ. ಯಡಿಯೂರಪ್ಪ ಅವರನ್ನು ಇಳಿಸಬೇಕು, ಉಳಿಸಬೇಕು ಎಂಬ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಬಿಜೆಪಿನವರಿಗೆ ಬೇರೆನು ಕಾಣುವದಿಲ್ಲ ಅವರು ಏನೇ ಆದರೂ ಕಾಂಗ್ರೆಸ್ ಮೇಲೆ ಗೂಬೆ ಕೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಶಾಸಕ ಎಚ್.ಕೆ.ಪಾಟೀಲ ಅವರು ಬಿಜೆಪಿ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss