ಗಲಭೆ ಸೃಷ್ಟಿಸಿದ ಬಿಜೆಪಿಗರ ಮೇಲೆ ಏನು ಕ್ರಮ ಕೈಗೊಳ್ಳಲಾಗುತ್ತದೆ? ಮಾಜಿ ಸಚಿವ ರಮಾನಾಥ ರೈ ಪ್ರಶ್ನೆ

0
306

ಮಂಗಳೂರು: ಸೀಲ್ ಡೌನ್ ವ್ಯಾಪ್ತಿಯ ಬಳಿ ಸಾಂತ್ವನ ಹೇಳಲು ಹೋದ ಸಂದರ್ಭ ನನ್ನ ವಿರುದ್ಧ ಬಿಜೆಪಿಯವರು ಸೀಲ್ ಡೌನ್ ಪ್ರದೇಶದ ಒಳಗೆ ಹೋಗಿದ್ದಾಗಿ ಆರೋಪಿಸಿದ್ದರು. ಅಲ್ಲದೆ ಪಂಚಾಯತ್ ಅಧ್ಯಕ್ಷರು ಸೀಲ್ ಡೌನ್ ಪ್ರದೇಶದ ಒಳಗೆ ಹೋಗಿದ್ದಾಗಿ ನನಗೆ ನೋಟಿಸ್ ನೀಡಿದ್ದರು. ಹಾಗಾದರೆ ಇದೀಗ ಸೀಲ್ ಡೌನ್ ಪ್ರದೇಶದ ಒಳಗೆ ಹೋಗಿ ಗಲಭೆ ಸೃಷ್ಟಿಸಿದ ಬಿಜೆಪಿಗರ ಮೇಲೆ ಏನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮಾಜಿ ಸಚಿವ ರಮಾನಾಥ ರೈ ಪ್ರಶ್ನಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಬಂಟ್ವಾಳ ಕಸಬಾ ಪ್ರದೇಶದಲ್ಲಿ ನೂರು ಮೀಟರ್ ವ್ಯಾಪ್ತಿಗಿಂತ ಹೆಚ್ಚು ಭಾಗ ಸೀಲ್ ಡೌನ್ ಮಾಡಲಾಗಿದೆ. ಅದನ್ನು ವಾಪಾಸ್ ಪಡೆಯಬೇಕೆಂದು ಕೆಲವರು ಗಲಾಟೆ ಮಾಡುತ್ತಿದ್ದಾರೆ. ಅವೈಜ್ಞಾನಿಕವಾಗಿ ಸೀಲ್ ಡೌನ್ ಆಗಿದ್ದಲ್ಲಿ ಅದನ್ನು ಖಂಡಿತಾ ಸರಿಪಡಿಸಬೇಕು. ಅದಕ್ಕಾಗಿ ಅಧಿಕಾರಿಗಳ ವಿರುದ್ಧ ಗಲಾಟೆ ಮಾಡುವಂತದ್ದು ಸರಿಯಲ್ಲ. ಬೇಕಾದರೆ ಪ್ರತಿಭಟನೆ ಮಾಡಬಹುದು ಎಂದು ರಮಾನಾಥ ರೈ ಹೇಳಿದರು.

LEAVE A REPLY

Please enter your comment!
Please enter your name here