Saturday, January 23, 2021

Latest Posts

ಗವಿಗಂಗಾಧರೇಶ್ವರನ ಸ್ಪರ್ಶಿಸದ ಸೂರ್ಯ ರಶ್ಮಿ: 53 ವರ್ಷದ ಸೇವೆಯಲ್ಲಿ ಇದೇ ಮೊದಲು ಎಂದ ಪ್ರಧಾನ ಅರ್ಚಕರು!

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಮಕರ ಸಂಕ್ರಾಂತಿ ದಿನವಾದ ಇಂದು ಬೆಂಗಳೂರಿನ ಗವಿಪುರಂ ಗುಟ್ಟಹಳ್ಳಿಯಲ್ಲಿರುವ ಗವಿಗಂಗಾಧರೇಶ್ವರನಿಗೆ ಮೋಡ ಕವಿದ ವಾತಾವರಣವಿದ್ದ ಕಾರಣ ನೇರವಾಗಿ ಸ್ಪರ್ಶಿಸಿಲ್ಲ. ಇದರಿಂದ ಸೂರ್ಯನ ಪೂಜೆಗಾಗಿ ಕಾತುರದಿಂದ ಕಾಯುತ್ತಿದ್ದ ಭಕ್ತರಿಗೆ ನಿರಾಸೆಯಾಗಿದೆ.
ಇನ್ನು ಈ ಕುರಿತು ಮಾತನಾಡಿದ ಪ್ರಧಾನ ಅರ್ಚಕ ಸೋಮಸುಂದರ್ ದೀಕ್ಷಿತ್, ಪ್ರಕೃತಿ, ದೈವ ನಿರ್ಣಯದಂತೆ ಈ ರೀತಿ ಆಗಿದೆ. ನನ್ನ 53 ವರ್ಷದ ಸೇವೆಯಲ್ಲಿ ಈ ಬಾರಿ ಸೂರ್ಯ ನೇರವಾಗಿ ಸ್ಪರ್ಶಿಸಿಲ್ಲ. ಅಭಿಷೇಕದ ವೇಳೆ ಸೂರ್ಯನ ಛಾಯೆ ಹಾದು ಹೋಗಿದೆ ಎಂದು ಅವರು ಹೇಳಿದ್ದಾರೆ.
ಯಾವ ವರ್ಷವೂ ಕಾಣದ ಅಗೋಚರ ಪೂಜೆ ಈ ಸಲ ಆಗಿದೆ. ಸೂರ್ಯ ವಿಶ್ವಕ್ಕೆ ಒಳ್ಳೆಯದನ್ನು ಮಾಡಲಿ. ಸೂರ್ಯನ ರಶ್ಮಿ ಲಿಂಗದ ಮೇಲೆ ಅಗೋಚರವಾಗಿ ಸ್ಪರ್ಶವಾಗಿದೆ. ಲಿಂಗದ ಮೇಲೆ ಕ್ಷೀರಾಭಿಷೇಕದ ಸಂದರ್ಭದಲ್ಲಿ ಸೂರ್ಯನ ಛಾಯೆ ಕಂಡು ಬಂದಿದೆ ಎಂದು ಹೇಳಿದ್ದಾರೆ.
ಸೂರ್ಯ ರಶ್ಮಿ ನಂದಿಯನ್ನು ಹಾದು ಗರ್ಭಗೃಹದವರೆಗೂ ತಲುಪಿ ಕೆಳಗಿನ ಲಿಂಗಕ್ಕೆ ಸ್ಪರ್ಶಿಸಿದೆ. ದೇವರ ಅನುಗ್ರಹದಿಂದ ಎಲ್ಲರಿಗೂ ಒಳ್ಳೆಯದಾಗಲಿ. ಉತ್ತರಾಯಣ ಕಾಲದಲ್ಲಿ ಕಷ್ಟಗಳು ದೂರವಾಗಲಿ ಎಂದು ಆಶಿಸಿದ್ದಾರೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss

error: Content is protected !!