Monday, August 8, 2022

Latest Posts

ಗಾಂಜಾ ಸೊಪ್ಪನ್ನು ಅಕ್ರಮ ಮಾರಾಟ ಮಾಡುತ್ತಿದ್ದ ಆರೋಪಿಗಳ ಬಂಧನ

ರಾಮನಗರ: ಅಕ್ರಮವಾಗಿ ಗಾಂಜಾ ಸೊಪ್ಪನ್ನು ಸಂಗ್ರಹಿಸಿ ಮಾರಾಟ ಮಾಡುತ್ತಿದ್ದ ದಂಧೆ ಕೋರನನ್ನು ಬಂಧಿಸಿ ಅವನಿಂದ ಗಾಂಜಾ ಸೊಪ್ಪನ್ನು ಪೊಲೀಸರು ವಶಪಡಿಸಿಕೊಂಡಿರುವುದು ತಾಲ್ಲೂಕಿನ ಚಿಕ್ಕದೇವರಹಳ್ಳಿ ಗ್ರಾಮದಲ್ಲಿ ನಡೆದಿದೆ. ತಾಲ್ಲೂಕಿನ ಮರಳವಾಡಿ ಹೋಬಳಿ ಕೀರಣಗೆರೆ ಗ್ರಾಮದ ಸಿದ್ದರಾಜು ಮಗ ಮುತ್ತುರಾಜು ಬಂಧಿತ ಆರೋಪಿಯಾಗಿದ್ದಾರೆ. ಇವರು ಹಾರೋಹಳ್ಳಿ ಹೋಬಳಿ ಚಿಕ್ಕಕಲ್ಬಾಳು ಗ್ರಾಮದ ವಾಸಿ ಕುಮಾರ್ ಎಂಬುವರು ಅಕ್ರಮವಾಗಿ ಬೆಳೆಯುತ್ತಿದ್ದ ಗಾಂಜಾ ಗಿಡಗಳನ್ನು ಯಾರಿಗೂ ಗೊತ್ತಾಗದಂತೆ ಖರೀದಿ ಮಾಡಿ ಸೊಪ್ಪನ್ನು ಒಣಗಿಸಿ ಹದಗೊಳಿಸಿ ಮಾರಾಟ ಮಾಡುತ್ತಿದ್ದರೆನ್ನಲಾಗಿದೆ. ತಮಗೆ ಬಂದ ಖಚಿತ ಮಾಹಿತಿ ಮೇರೆಗೆ ರಾಮನಗರ ಎಸ್.ಪಿ. ಗಿರೀಶ್.ಎನ್, ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಪುರುಷೋ ತ್ತಮ್ ಸಲಹೆ ಸೂಚನೆ ಮೇರೆಗೆ ಹಾರೋಹಳ್ಳಿ ಸಿಪಿಐ ಸತೀಶ್.ಸಿ ದಾಳಿ ನಡೆಸಿ ಆರೋಪಿನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ದಾಳಿ ವೇಳೆ ೧.೩ ಕೆಜಿ ತೂಕದ ಹಸಿ ಗಾಂಜಾ ಸೊಪ್ಪಿನ ಗಿಡಗಳು, ೪.೮ ಗ್ರಾಂ ತೂಕದ ಒಣಗಿದ ಸೊಪ್ಪಿನ ಗಿಡಗಳು, ೧.೫ ಗ್ರಾಂ ತೂಕದ ಒಣಗಿಸಿ ಹದ ಮಾಡಿದ ಗಾಂಜಾ ಸೊಪುö್ಪ, ಒಟ್ಟು ೭ಕೆಜಿ ೬೦೦ ಗ್ರಾಂ ತೂಕದ ಗಾಂಜಾ ಸೊಪ್ಪನ್ನು ವಶಕ್ಕೆ ಪಡೆದಿದ್ದು ಆರೋಪಿ ವಿರುದ್ದ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss