Thursday, August 18, 2022

Latest Posts

ಗಾನಗಾರುಡಿಗ ಎಸ್‍ಪಿಬಿ ಗಾಯನ ಕಲಾವಿದರ ಜಗತ್ತಿನಲ್ಲಿ ಮೇರುಪರ್ವತ: ದೇವರಾಜು ಕೊಪ್ಪ

ಮಂಡ್ಯ: ಗಾಯನ ಕ್ಷೇತ್ರದ ಗಾನಗಾರುಡಿಗ ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರು ಗಾಯನ ಕಲಾವಿದರ ಜಗತ್ತಿನಲ್ಲಿ ಮೇರುಪರ್ವತವಾಗಿರುತ್ತಾರೆ ಎಂದು ಜಾನಪದ ಗಾಯನ ಕಲಾವಿದರ ಬಳಗದ ದೇವರಾಜು ಕೊಪ್ಪ ಹೇಳಿದರು.
ನಗರದ ಕಲಾಮಂದಿರದ ಬಳಿ ಗಾಯನ ಕಲಾವಿದರ ಬಳಗ ಆಯೋಜಿಸಿದ್ದ ಹಿರಿಯ ಗಾಯಕ, ಪದ್ಮ ವಿಭೂಷಣ ಪ್ರಶಸ್ತಿ ಪುರಸ್ಕøತ ಡಾ. ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಮತ್ತು ಗಾಯನ ನಮನ ಸಲ್ಲಿಸಿ ಮಾತನಾಡಿದ ಅವರು, ಜಗತ್ಪ್ರಸಿದ್ದ ಹಿನ್ನಲೆಗಾನ ಗಾರುಡಿಗ ಇನ್ನು ನೆನಪು ಮಾತ್ರ. ಆದರೆ ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರು ಹಾಡುಗಳ ಮೂಲಕ ಅಭಿಮಾನಿಗಳ ನೆನಪಿನಲ್ಲಿ ಸದಾ ಜೀವಂತವಾಗಿರುತ್ತಾರೆ. ಇಂತಹ ಮೇರುಕಲಾವಿದರ ಅಗಲಿಕೆಗೆ ಕೋಟ್ಯಂತ ಮಂದಿ ಅಭಿಮಾನಿಗಳು ತಬ್ಬಲಿಗಳಾಗಿದ್ದಾರೆ ಎಂದು ನುಡಿದರು.
ವಿವಿಧ ಭಾಷೆಗಳಲ್ಲಿ 45 ಸಾವಿರಕ್ಕೂ ಹೆಚ್ಚು ಹಾಡಿರುವ ಗಾಯಕ ಬಾಲಸುಬ್ರಹ್ಮಣ್ಯಂ. ಅತಿ ಹೆಚ್ಚು ಹಾಡು ಹಾಡಿರುವ ಕಾರಣದಿಂದಲೇ ಅವರ ಹೆಸರು ಗಿನ್ನೆಸ್ ರೆಕಾರ್ಡ್ ಪುಸ್ತಕ ಸೇರಿದೆ. ವರ್ಷದಲ್ಲಿ 930 ಹಾಡುಗಳು ಅಂದರೆ, ದಿನಕ್ಕೆ ಅಂದಾಜು 3 ಹಾಡುಗಳು ಎಂದರೂ 2018ರ ಹೊತ್ತಿಗೆ 40 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಇಷ್ಟೇ ಅಲ್ಲದೆ ಹಲವಾರು ಖಾಸಗಿ ಆಲ್ಬಂಗಳೂ ಎಸ್. ಪಿ ಬಾಲಸುಬ್ರಹ್ಮಣ್ಯಂ ಅವರ ಖಾತೆಯಲ್ಲಿವೆ ಎಂದು ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!