Thursday, August 11, 2022

Latest Posts

ಗಾಳಿಪಟ ಹಿಡಿಯಲು ಓಡಿದ ಬಾಲಕ ಸೀದ ಗೊಬ್ಬರದ ಗುಂಡಿಗೆ ಬಿದ್ದ,ಮುಂದೇನಾಯ್ತು?

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಗಾಳಿಪಟ ಹಿಡಿಯಲು ಓಡಿ ಹೋದ ಬಾಲಕ, ದೊಡ್ಡ ಸಗಣಿ ಗುಂಡಿಗೆ ಬಿದ್ದು ಮೃತಪಟ್ಟಿದ್ದಾನೆ.
ಮುಂಬೈನ ಕಂಡಿವಲಿಯ ಎಸ್‌ಆರ್‌ಎ ಕಾಲೋನಿಯಲ್ಲಿ ಘಟನೆ ಸಂಭವಿಸಿದೆ.
10  ವರ್ಷದ ಬಾಲಕ ದಿನವಿಡೀ ಗಾಳಿಪಟದ ಜೊತೆ ಆಟ ಆಡುತ್ತಿದ್ದ.  ಗಾಳಿಪಟದ ದಾರ ಕಿತ್ತು ಹೋಗಿದ್ದು, ಬಾಲಕ ಗಾಳಿಪಟವನ್ನು ಹಿಂಬಾಲಿಸಿದ್ದಾನೆ. ಗಾಳಿಪಟ ದನದ ಕೊಟ್ಟಿಗೆ ಬಳಿ ಹೋಗಿದ್ದು, ಇವನೂ ಅದನ್ನು ಹಿಂಬಾಲಿಸಿದ್ದಾನೆ. ಗಾಳಿಪಟ ಹಿಡಿಯಲು ಮೇಲಕ್ಕೆ ಹಾರಿ ಕೆಳಗೆ ನೋಡದೇ ಸೀದ ಗೊಬ್ಬರದ ಗುಂಡಿಗೆ ಬಿದ್ದಿದ್ದಾನೆ. ಸಗಣಿ ರಾಶಿ ಗುಂಡಿ ಆಳವಾಗಿದ್ದರಿಂದ ಯಾರೂ ಇಳಿಯಲಾಗದೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕಟ್ಟಡ ಕೆಲಸಗಾರರು ಹಾಗೂ ಕ್ರೇನ್ ಬಳಸಿ ಬಾಲಕನನ್ನು ಹೊರತೆಗೆಯಲಾಯಿತು. ತಕ್ಷಣ ಆಸ್ಪತ್ರೆಗೆ ಕರೆದೊಯ್ದರು ಯಾವುದೇ ಪ್ರಯೋಜನವಾಗಿಲ್ಲ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss