ಅವಲಕ್ಕಿಯನ್ನು ನಾನಾ ರೀತಿಯಲ್ಲಿ ಮಾಡಬಹುದು. ಹೇಗೆ ಮಾಡಿ ಕೊಂಡರು ತಿಂದರೂ ಅವಲಕ್ಕಿ ರುಚಿಯೇ. ಗಿರಿಗಿರಿ ಮಂಡಕ್ಕಿ ಸ್ಟೈಲ್ ನಲ್ಲಿಯೇ ಅವಲಕ್ಕಿ ಕೂಡ ಮಾಡಬಹುದು. ಎಷ್ಟು ಈಸಿ ರೆಸಿಪಿ ಇದು ಗೊತ್ತಾ? ಹೀಗೆ ಮಾಡಿ..
ಬೇಕಾಗುವ ಸಾಮಗ್ರಿ:
ಅವಲಕ್ಕಿ
ಈರುಳ್ಳಿ
ಟೊಮಾಟೋ
ಹಸಿ ಮೆಣಸು
ಕಡಲೆ ಹಿಟ್ಟು
ಲಿಂಬು
ಉಪ್ಪು
ಮೆಣಸಿನ ಪುಡಿ
ಎಣ್ಣೆ
ಕೊತ್ತಂಬರಿ ಸೊಪ್ಪು
ಮಾಡುವ ವಿಧಾನ:
ಮೊದಲಿಗೆ 4 ಚಮಚ ಎಣ್ಣೆ ತೆಗೆದುಕೊಳ್ಳಿ. ಅದಕ್ಕೆ ಹೆಚ್ಚಿಕೊಂಡ ಈರುಳ್ಳಿ, ಟೊಮಾಟೋ, ಹಸಿಮೆಣಸು, ಕೊತ್ತಂಬರಿ ಸೊಪ್ಪು, ಉಪ್ಪು, ಖಾರದ ಪುಡಿ, ಕಡಲೆ ಹಿಟ್ಟು 1 ಚಮಚ, ಲಿಂಬು ರಸ ಹಾಕಿ ಎಲ್ಲವನ್ನೂ ಮಿಕ್ಸ್ ಮಾಡಿಕೊಳ್ಳಿ.
ನಂತರ ಅದಕ್ಕೆ ಅವಲಕ್ಕಿ ಹಾಕಿದ ಚೆನ್ನಾಗಿ ಮಿಕ್ಸ್ ಮಾಡಿದರೆ ಗಿರಿಗಿರಿ ಮಂಡಕ್ಕಿ ಸ್ಟೈಲ್’ನ ಅವಲಕ್ಕಿ ರೆಡಿ.