ಹೊಸ ದಿಗಂತ ವರದಿ, ಯಾದಗಿರಿ:
ಯಾದಗಿರಿ ಜಿಲ್ಲೆಯ ಉಸ್ತುವಾರಿ ಕಾರ್ಯದರ್ಶಿಯಾಗಿ ನೈಸರ್ಗೀಕ ವಿಕೋಪ ಮತ್ತು ಸಿಬ್ಬಂದಿ ಆಡಳಿತ ಸುದಾರಣೆ ಇಲಾಖೆಯ ಕಾರ್ಯದರ್ಶಿಯಾದ ಮೌನೀಶ ಮುದ್ಗಲ್ ಅವರನ್ನು ರಾಜ್ಯ ಸರಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ.
ಯಡಿಯೂರಪ್ಪನವರ ಆಡಳಿತದಲ್ಲಿ ಜಿಲ್ಲಾ ಕೇಂದ್ರವಾಗಿ ಮಾರ್ಪಟ್ಟ ಮತ್ತು ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗೆ ಒಳಪಟ್ಟ ಹಿಂದುಳಿದ ಯಾದಗಿರ ಜಿಲ್ಲೆಯಲ್ಲಿ ಹಲವು ಅಭಿವೃದ್ದಿ ಕಾರ್ಯಗಳ ಆಮೆಗತಿ ವೇಗದಲ್ಲಿ ಸಾಗಿದೆ. ಇದರಿಂದ ಜಿಲ್ಲೆಯ ಅಭಿವೃದ್ದಿಗೆ ಜಿಡ್ಡು ಹಿಡಿದಂತಾಗಿದೆ ಎಂಬ ಮಾತುಗಳು ಸಾರ್ವಜನಕಿ ವಲಯದಲ್ಲಿ ಕೇಳಿಬರುತ್ತಲಿವೆ.
ಈ ತನಕ ನೇಮಕಗೊಂಡ ಉಸ್ತುವಾರಿ ಕಾರ್ಯದರ್ಶಿಗಳು ಕೇವಲ ಸಭೆಗಳಿಗೆ ಮಾತ್ರ ಸೀಮಿತರಾಗಿದ್ದು ಅಭಿವೃದ್ದಿಗೆ ಹೆಚ್ಚಿನ ಒತ್ತು ನಿಡಿಲ್ಲ. ಅಲ್ಲದೆ ಅದಿಕಾರಿಗಳ ಮೇಲೆ ನಿಯಂತ್ರಣ ಸಾಧಸಿಲು ವಫಲಾರಾಗಿದ್ದರಿಂದ ಜಿಲ್ಲೆಗೆ ಬಂದ ಅನುದಾನ ಸದ್ಬಳಕೆಯಾಗದೆ ಹಿನ್ನಡೆ ಸಾಧಿಸಿದೆ.
ಈ ಭಾಗದಲ್ಲಿ ಕೆಲಸ ಮಾಡಿದ ಮತ್ತು ಜಿಲ್ಲೆಯನ್ನು ವಾಸ್ತವಿಕತೆಯನ್ನು ಅರಿತ ಮೌನೀಸ ಮುದ್ಗಲರವರನ್ನು ಜಿಲ್ಲೆಯ ಉಸ್ತುವಾರಿ ಮಾಡಿದ್ದರಿಂದ ಬರುವ ದಿನಗಳಲ್ಲಿ ಅಭವೇದ್ಧಿಗೆ ವೇಗ ಸಿಗಬಹುದು ಎಂಬ ನಿರೀಕ್ಷೆ ಜಿಲ್ಲೆಯ ಜನರದಾಗಿದೆ. ಈ ಹಿಂದೆ ಭೀಮರಯನ ಗುಡಿ ಕೃಷ್ಣಾ ನಿಗಮ ಕಾಡಾ ಆಡಳಿತಾಧಿಕಾರಿಯಾಗಿ, ಕಲಬುರಗಿ ಜೆಸ್ಕಾಂ ನಿರ್ದೇಶಕರಾಗಿ ಮತ್ತು ರಾಜ್ಯ ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಪಾರದರ್ಶಕತೆ ಮತ್ತು ಪ್ರಾಮಾಣಿಕವಾಗಿ ಹೆಸರುವಸಿಯಾದ ಇವರು ಜಿಲ್ಲೆಯ ಅಧಿಕಾರಿಗಳಿಗೆ ಚಾಟಿಬೀಸಿ ಸರಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸಲು ಶ್ರಮಿಸವು ಭರವಸೆ ಉನರಲ್ಲಿ ಕಂಡುಬರುತ್ತಿದೆ.
ಈಗಾಗಲೇ ಕೆಲವು ರಾಜಕೀಯ ಮುಖಂಡರು ಇವರನ್ನು ಜಿಲ್ಲೆಗೆ ಬರದಂತೆ ತೆರಮರೆಯಲ್ಲಿ ಪ್ರಯತ್ನಿಸುತ್ತಿದ್ದಾರೆ ಎಂಬ ವದಂತಿಗಳು ಕೇಳಿಬರುತ್ತಿವೆ. ಯಾವದಕ್ಕೂ ಮೌದ್ಗಿಲ ಜಿಲ್ಲೆಯ ಜನಪ್ರತಿನಿಧಿಗಳನ್ನು ಮತ್ತು ಅಧಿಕಾರಿ ವರ್ಗದವರನ್ನು ಸಹಮತಕ್ಕೆ ತೆಗೆದುಕೊಂಡು ಯಾವ ರಿತಿ ಅಭವೃದ್ಧಿ ಮಾಡುತ್ತಾರೆ ಎಂಬುದು ಈಗಿನ ಪ್ರಶ್ನೆಯಾಗಿದೆ.