ಗಿಲೆಡ್ ಸೈನ್ಸ್ ಕಂಪನಿ ಜೊತೆ ಆರೋಗ್ಯ ಇಲಾಖೆ ಮಂಥನ: ಭಾರತೀಯ ಮಾರುಕಟ್ಟೆಗೆ ರೆಮ್ಡಿಸಿವಿರ್?

0
321

ಹೊಸದಿಲ್ಲಿ: ದೇಶದಲ್ಲಿ ಕೊರೋನಾ ಸೋಂಕಿನ ನಿವಾರಣೆಗೆ ರೆಮ್ಡಿಸಿವಿರ್ ಔಷಧಿಯನ್ನು ಮುಕ್ತ ಮಾರುಕಟ್ಟೆಗೆ ಬಿಡುಗಡೆಗೊಳಿಸಲು ಅಮೆರಿಕ ಖಾಸಗಿ ಕಂಪನಿ ಗಿಲೆಡ್ ಸೈನ್ಸ್ ಸಿದ್ಧವಾಗಿದೆ.
ಔಷಧಿಯ ಮುಕ್ತ ಮಾರುಕಟ್ಟೆ ಪ್ರವೇಶಕ್ಕೆ ಮುನ್ನ, ಅಮೆರಿಕನ್ ಕಂಪನಿ ಭಾರತೀಯ ಔಷಧ ನಿಯಂತ್ರಣ ಮಹಾ ಮಂಡಳಿ ಕಡ್ಡಾಯವಾಗಿ ಅನುಮತಿಯನ್ನು ಪಡೆಯಬೇಕಿದೆ. ಈ ದಿಶೆಯಲ್ಲಿ ಕೇಂದ್ರ ಆರೊಗ್ಯ ಇಲಾಖೆಯ ಉನ್ನತ ಅಧಿಕಾರಿಗಳ ಜೊತೆ ಕಂಪನಿ ಪ್ರಮುಖರು ಈಗಾಗಲೇ ಚರ್ಚೆ ನಡೆಸಿದ್ದಾರೆ. ಔಷಧ ನಿಯಂತ್ರಣ ಮಂಡಳಿಯಿಂದ ಅನುಮತಿ ದೊರೆತಲ್ಲಿ ಜುಲೈ ಒಳಗೆ ಭಾರತಕ್ಕೆ ಇದನ್ನು ಪೂರೈಸಲು ತಾನು ಸಿದ್ಧವಿರುವುದಾಗಿ ಕಂಪನಿ ವಕ್ತಾರರು ತಿಳಿಸಿದ್ದಾರೆ.
ಮೇ ೧೨ ರಂದು ೧೦೦೦ ಲಸಿಕೆಯನ್ನು ಪೂರೈಸಲು ಏಮ್ಸ್ ವೈದ್ಯರು ಗಿಲೆಡ್‌ಸೈನ್ಸ್ ಕಂಪನಿಯನ್ನು ಕೋರಿದ್ದರು. ಕಳೆದ ಎರಡು ತಿಂಗಳಿಂದ ಗಿಲೆಡ್ ಸೈನ್ಸ್ ಅಮೆರಿಕದ ವಿಶ್ವ ವಿದ್ಯಾಲಯವೊಂದರಲ್ಲಿ ಮುಂದುವರಿದಿರುವ ವೈದ್ಯಕೀಯ ಸಂಶೋಧಕರ ಜೊತೆ ನಿರಂತರ ಸಂಪರ್ಕದಲ್ಲಿದ್ದು ಈಗಾಗಲೇ ಇದನ್ನು ಅಲ್ಲಿ ಸೋಂಕಿತರ ಚಿಕಿತ್ಸೆಗೆ ಬಳಸಲಾಗುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ ಕೂಡಾ ರೆಮ್ಡಿ ಸಿವಿರ್ ಔಷಧಿಯನ್ನು ಜಾಗತಿPವಾಗಿ ಬಳಸುವ ವಿಷಯವನ್ನು ಗಂಭೀರವಾಗಿ ಪರಿಶೀಲಿಸುತ್ತಿದೆ. ಐಸಿಎಂಆರ್ ಕೂಡಾ ಈ ಹಿಂದೆಯೇ ಔಷಧಿ ಬಳಕೆಗೆ ತನ್ನ ಇಂಗಿತವನ್ನು ವ್ಯಕ್ತಪಡಿಸಿತ್ತು.

LEAVE A REPLY

Please enter your comment!
Please enter your name here