ಚಾಮರಾಜನಗರ: ಜಿಲ್ಲೆಯ ಗುಂಡ್ಲುಫೇಟೆ ಪಟ್ಟಣದ ಹೊರ ವಲಯದಲ್ಲಿರುವ ಖಾಸಗಿ ಜಮೀನಿಗಳಲ್ಲಿ ಕೋರೋನಾ ವೈರಾಸ್ ಭಯವಿಲ್ಲದೇ ಪ್ರತಿನಿತ್ಯ ನೂರಾರು ಮಂದಿ ಜೂಜಾಟದಲ್ಲಿ ತೊಡಗಿದ್ದು, ಅಕ್ಕಪಕ್ಕದ ಜಮೀನಿನ ಮಾಲೀಕರು ಹಾಗೂ ನಿವಾಸಿಗಳು ಅತಂಕಕ್ಕೆ ಒಳಗಾಗಿದ್ದಾರೆ.
ಗುಂಡ್ಲುಪೇಟೆ ಪಟ್ಟಣಕ್ಕೆ ಹೊಂದಿಕೊಂಡಂತೆ ಇರುವ ಬಂಡೀಪುರ ರಾಷ್ಟ್ರೀಯ ಹೆದ್ದಾರಿ ಮಾರ್ಗದಲ್ಲಿರುವ ಅಂಬೇಡ್ಕರ್ ಭವನದ ಸುತ್ತಮುತ್ತಲಿನ ಜಮೀನುಗಳಲ್ಲಿ ತಾತ್ಕಾಲಿಕ ಷೆಡ್ಗಳನ್ನು ಹಾಕಿಕೊಂಡು ಇಸ್ಪೀಟ್ ಆಡುವ ದಂಧೆ ರಾಜರೋಷವಾಗಿ ನಡೆಯುತ್ತಿದೆ. ಈ ವ್ಯಾಪ್ತಿಯ ಜಮೀನುಗಳಲ್ಲಿ ಹಗಲು ರಾತ್ರಿ ಎನ್ನದೇ ಜೂಜುಕೋರರು ಕಾರು ಹಾಗು ಬೈಕ್ಗಳಲ್ಲಿ ಬಂದು ಒಂದೆಡೆ ನಿಲ್ಲಿಸಿ, ಆಟದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಅಲ್ಲದೇ ಬೆಳಗ್ಗೆ ಬಂದರೆ ಈ ವಾಹನಗಳು ಇನ್ನು ಹೋಗುವುದು ಎಷ್ಟೋ ಹೊತ್ತಿಗೆ ಎಂಬುವುದು ಅಲ್ಲಿನ ಸ್ಥಳೀಯರಿಗೆ ತಿಳಿಯುತ್ತಿಲ್ಲ. ಆಟದ ಜೊತೆಗೆ ಎಲ್ಲಾ ರೀತಿಯ ವ್ಯವಸ್ಥೆಯನ್ನು ಕುಳಿತ ಸ್ಥಳದಲ್ಲಿ ಸಂಘಟಕರು ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳು ಬರುತ್ತಿವೆ.
ಕೆಲವು ತಿಂಗಳ ಹಿಂದೆ ಈ ಸ್ಥಳದಲ್ಲಿ ಇಸ್ಪೀಟ್ ದಂಧೆಯಲ್ಲಿ ಸಿಲುಕಿ, ಸಾಲ ಭಾದೆಯಿಂದ ಒಬ್ಬ ವ್ಯಕ್ತಿ ನೇಣು ಬಿಗಿದು ಕೊಂಡಿದ್ದ. ಬಳಿಕ ಈ ಅಡ್ಡೆಗೆ ಬ್ರೇಕ್ ಬಿದ್ದಿತ್ತು. ಈಗ ಕೋರೋನಾ ವೈರಾಸ್ ಹಿನ್ನೆಲೆಯಲ್ಲಿ ಎಲ್ಲಿಯೂ ಸಹ ಕೆಲಸ ಕಾರ್ಯಗಳು ನಡೆಯದೇ ಇರುವುದು. ಬಾರ್ ಮತ್ತು ಕ್ಲಬ್ಗಳು ಮುಚ್ಚಿರುವ ಕಾರಣ ಇಂಥ ಅಜ್ಞಾತ ಸ್ಥಳಗಳನ್ನು ಜೂಜುಗೋರರು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಈ ಸ್ಥಳಕ್ಕೆ ಬೆಂಗಳೂರು, ಮಳವಳ್ಳಿ, ಕೊಳ್ಳೇಗಾಲ, ಮಂಡ್ಯ ಹಾಗೂ ಮೈಸೂರು ಭಾಗದಿಂದ ಕಾರು ಮತ್ತು ಬೈಕ್ಗಳಲ್ಲಿ ಬರುತ್ತಿದ್ದು, ಇದರ ಬಗ್ಗೆ ಸಾರ್ವಜನಿಕರು ಸಂಬಂಧಪಟ್ಟವರಿಗೆ ಮೌಖಿಕವಾಗಿ ದೂರು ನೀಡಿದ್ದರು ಯಾವುದೇ ಪ್ರಯೋಜನವಾಗಿಲ್ಲ ಎನ್ನಲಾಗಿದೆ. ಕೋರೋನಾ ವೈರಸ್ ಕಾಲದಲ್ಲಿ ಇಷ್ಟೋಂದು ದೊಡ್ಡ ಪ್ರಮಾಣದಲ್ಲಿ ಜೂಜಾಟ ನಡೆದರೆ ವೈರಾಸ್ ಹಬ್ಬುವುದಿಲ್ಲವೇ? ಇಂಥ ಅಕ್ರಮಗಳನ್ನು ಪೊಲೀಸರು ಏಕೆÀ ತಡೆಯಲು ಮುಂದಾಗಿಲ್ಲ. ಇನ್ನಾದರೂ ಎಚ್ಚೆತ್ತು ಗುಂಡ್ಲುಪೇಟೆ ಕೋರಾನ್ ಹಾಟ್ಸ್ಸ್ಪಾಟ್ ಆಗುವ ಮುನ್ನಾ ಇಂಥವರ ವಿರುದ್ದ ಉಗ್ರ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.