Thursday, August 18, 2022

Latest Posts

ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದ ಅಜ್ಜ, ಮೊಮ್ಮಗನಿಗೆ ಮತ್ತೆ ಕಾಡಿದ ಕೊರೋನಾ

ಮೈಸೂರು: ಕೊರೋನಾ ಸೋಂಕಿನಿoದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಅಜ್ಜಿ ಮೊಮ್ಮಗನಿಗೆ ಅದೇ ದಿನವೇ ಮತ್ತೆ ಸೊಂಕು ತಗುಲಿದೆ. ಅಲ್ಲದೆ ಮನೆಯ ಮತ್ತೆ ನಾಲ್ವರಿಗೆ ಕೊರೋನಾ ಪಾಸಿಟಿವ್ ಬಂದು ಮೈಸೂರಿನ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದಾರೆ.  ತಮಿಳುನಾಡಿನಿಂದ ಮೈಸೂರಿನ ಇಟ್ಟಿಗೆಗೂಡಿಗೆ ಬಂದಿದ್ದ ವ್ಯಕ್ತಿಗಳಿಂದ ಅಜ್ಜಿ ಮೊಮ್ಮಗನಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಈಗ ಈ ಇಬ್ಬರು ಗುಣಮುಖರಾಗಿ ಮನೆಗೆ ಮರಳಿದ ನಂತರ, ಅದೇ ಮನೆಯಲ್ಲಿದ್ದ ಮತ್ತೆ ನಾಲ್ವರಿಗೆ ಸೋಂಕು ತಗಲಿದೆ. ಇದರಿಂದ ಇಟ್ಟಿಗೆಗೂಡಿನಲ್ಲಿರುವ ಅವರ ಮನೆಯನ್ನು ಸೀಲ್‌ಡೌನ್‌ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದರು.
ಕೊರೋನಾ ವೈರಸ್ ಸೋಂಕು ದಿನೇ ದಿನೇ ಹೆಚ್ಚಾಗುತ್ತಿದೆ. ಹಾಗಾಗಿ ಕೊರೋನಾ ವೈರಸ್ ಸೋಂಕಿನ ಲಕ್ಷಣ ಕಾಣಿಸಿಕೊಳ್ಳುವವರು ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಪ್ರತಿ ನಿತ್ಯ ಹೊರರಾಜ್ಯದಿಂದ ಸರಾಸರಿ ೧೫೦ಕ್ಕೂ ಹೆಚ್ಚು ಜನ ಬರ್ತಿದ್ದಾರೆ. ಬಂದವರನ್ನು ಕ್ವಾರೆಂಟೈನ್ ಮಾಡ್ತಿದ್ದೀವಿ. ಅವರನ್ನು ಪರೀಕ್ಷೆಗೆ ಒಳಪಡಿಸಿ ಸೋಂಕು ಲಕ್ಷಣ ಇದ್ದರೆ ಆಸ್ಪತ್ರೆಗೆ ದಾಖಲು ಮಾಡುತ್ತೇವೆ ಎಂದರು.
ನೌಕರನಿಗೆ ಕೊರೋನಾ, ಬ್ಯಾಂಕ್‌ಗೆ ಸೀಲ್ ಡೌನ್ 
ಮೈಸೂರಿನ ಸರಸ್ವತಿಪುರಂನಲ್ಲಿರುವ ಸಿಂಡಿಕೇಟ್ ಬ್ಯಾಂಕ್ ಶಾಖೆಯ ನೌಕರನೊಬ್ಬನಿಗೆ ಕೊರೋನಾ ವೈರಸ್ ಸೋಂಕು ತಗುಲಿರುವುದು ಪರೀಕ್ಷಾ ವರದಿಯಿಂದ ದೃಢಪಟ್ಟಿದೆ.
ಇದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಬ್ಯಾಂಕ್ ನ್ನು ಸಂಪೂರ್ಣವಾಗಿ ಸ್ಯಾನಿಟೈಸರ್ ಮಾಡಲಾಗಿದೆ. ಬ್ಯಾಂಕ್ ಇದ್ದ ಸ್ಥಳವನ್ನು ಸೀಲ್ ಡೌನ್ ಮಾಡಲಾಗಿದೆಜೊತೆಗೆ ಬ್ಯಾಂಕ್ ಹತ್ತಿರ ಯಾರೂ ಹೋಗದಂತೆ ನಿರ್ಬಂಧ ಹೇರಲಾಗಿದೆ.ಇನ್ನು ಈಗಾಗಲೇ ಬ್ಯಾಂಕ್‌ನ ಎಲ್ಲ ನೌಕರರನ್ನು ಪರೀಕ್ಷೆಗೆ ಒಳಪಡಿಸಿದ್ದು, ಹೋಮ್ ಕ್ವಾರಂಟೈನ್ ನಲ್ಲಿ ಇರುವಂತೆ ಸೂಚಿಸಲಾಗಿದೆ.
ಸೋಂಕಿತರೊoದಿಗೆ ಪ್ರಯಾಣಿಸಿದವರು, ಆಸ್ಪತ್ರೆಗೆ ಭೇಟಿ ನೀಡಿದವರು ಹೆಸರು ನೋಂದಾಯಿಸಿಕೊಳ್ಳಿ 
ಕೋವಿಡ್-19 ಸೋಂಕಿತ ವ್ಯಕ್ತಿ ಭೇಟಿ ನೀಡಿದ ಆಸ್ಪತ್ರೆಗೆ ಬಂದಿದ್ದವರು ಹಾಗೂ ಮತ್ತೊಬ್ಬ ಸೋಂಕಿತನೊAದಿಗೆ ಪ್ರಯಾಣಿಸಿದವರು ಕೂಡಲೇದತಮ್ಮ ನೋಂದಾಯಿಸಿಕೊಳ್ಳುವoತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ವೆಂಕಟೇಶ್ ಸೂಚಿಸಿದ್ದಾರೆ.
ಪಿ-೬೨೭೮ ಸೋಂಕಿತ ವ್ಯಕ್ತಿ ಮೈಸೂರು ಜಿಲ್ಲೆಯ ಕೆ.ಆರ್. ನಗರದ ನಿವಾಸಿಯಾಗಿದ್ದು, ಜೂನ್೬ ಹಾಗೂ ಜೂನ್ ೯ ರಂದು ಕೆ.ಆರ್.ನಗರದ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಪ್ರಸೂತಿ/ಸ್ತಿç ರೋಗ ತಜ್ಞರನ್ನು ಪ್ರಸೂತಿ ಆರೈಕೆಗೆ ಭೇಟಿಯಾಗಿದ್ದರು. ಅಂದು ಆಸ್ಪತ್ರೆಗೆ ಭೇಟಿ ನೀಡಿದ ಹೊರ ರೋಗಿಗಳು ತಮ್ಮ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನೋಂದಾಯಿಸಿಕೊAಡು ತಪಾಸಣೆ ಮಾಡಿಸಿಕೊಳ್ಳಬೇಕು.
ಪಿ-೭೨೮೫ ಸೋಂಕಿತ ವ್ಯಕ್ತಿ ಜೂನ್ 11 ರಂದು ಬೆಂಗಳೂರು ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಮೈಸೂರಿಗೆ ರಾಜಹಂಸ ಬಸ್ ಸಂಖ್ಯೆ ಕೆಎ-೦೯-ಎಫ್-೪೬೬೩ರಲ್ಲಿ ಪ್ರಯಾಣ ಮಾಡಿದ್ದರು. ಅಂದು ಪ್ರಯಾಣಿಸಿರುವ ಪ್ರಯಾಣಿಕರು ಹತ್ತಿರದ ಸರ್ಕಾರಿ ಆಸ್ಪತ್ರೆ ಅಥವಾ ಡಿ.ಸಿ.ಕಂಟ್ರೋಲ್ ರೂಮ್ ಸಂಖ್ಯೆ:-೦೮೨೧-೨೪೨೩೮೦೦ ಕರೆ ಮಾಡಿ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವAತೆ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!