ಗುರುಮಠಕಲ್: ಲಾಕ್ಡೌನ್ ಆಗಿದ್ದಾಗಿನಿಂದ ಜನರು ಹೊರಗಡೆ ಸಂಚಾರ ಮಾಡಲು ನಿರ್ಬಂಧ ಹೇರಲಾಗಿದೆ. ಜನರಿಗೆ ಸಾಮಾಜಿಕ ಅಂತರ ಕಾಪಾಡುವಂತೆ ದೇಶದ ಪ್ರಾಧನಿ ಕೈಮುಗಿದು ಕೇಳಿದರೂ ಜನರು ತಮ್ಮ ನಿತ್ಯದ ಓಡಾಟಕ್ಕೆ ಕಡಿವಾಣ ಹಾಕಿಕೊಳ್ಳದೇ ತಿರುಗಾಡುತ್ತಿದ್ದಾರೆ. ಇದಕ್ಕೆ ನಿದರ್ಶನ ಎಂಬ0ತೆ ಸೋಮವಾರ ಉರಿಬಿಸಿಲಿನಲ್ಲಿ ಎಸ್ಬಿಐ ಟಿನಿ ಸೇವಾಕೇಂಧ್ರದ ಎದುರು ಸಾಲುಗಟ್ಟಿ ಜನರು ನಿಂತಿದ್ದರು.
ಜನರ ಜನಧನ್ ಖಾತೆಗೆ ಹಣ ಬಂದಿದ್ದು ಜನರು ಹಣಕ್ಕಾಗಿ ಬ್ಯಾಂಕುಗಳ ಕಡೆಗೆ ಮುಖ ಮಾಡಿದ್ದಾರೆ. ಲಾಕ್ಡೌನ್ ಹಿನ್ನಲೆಯಲ್ಲಿ ಜನರಿಗೆ ಕೂಲಿ ಮಾಡಲು ಕೆಲಸ ಇಲ್ಲಾ. ಕೈಯಲ್ಲಿ ಕಾಸಿಲ್ಲ, ನಿತ್ಯ ಜೀವನಕ್ಕೆ ಹಣ ಬೇಕು. ಹಳ್ಳಿಗಳಿಂದ ಪಟ್ಟಣಗಳ ಕಡೆಗೆ ವಲಸೆ ಹೋಗಿದ್ದ ಬಹುತೇಕ ಶೇ.೯೦ ಪ್ರತಿಶತ ಜನರು ಈಗ ತಮ್ಮ ಸಂತ್ವ ಗೂಡಿಗೆ ಸೇರಿದ್ದಾರೆ. ವಲಸಿಗರು ತಮ್ಮ ಹಳ್ಳಿಗಳಿಗೆ ಸೇರಿದ್ದರಿಂದ ಹಳ್ಳಿಗಳು ತುಂಬಿವೆ.
ಈಗ ಹಳ್ಳಿಜನರು ತಮ್ಮ ಹಣಕ್ಕಾಗಿ ಉರಿ ಬಿಸಿಲು ಲೆಕ್ಕಿಸದೇ, ಸಾಮಾಜಿಕ ಅಂತರ ಕಾಪಾಡದೇ ಬ್ಯಾಂಕ್ಳಿಗೆ ಮುಗಿಬಿದ್ದಿದ್ದಾರೆ. ಬಂದಿರುವ ಜನರಿಗೆ ಪಟ್ಟಣದಲ್ಲಿ ಕುಡಿಯಲು ನೀರು ಸಿಗುವುದು ಕಷ್ಟವಾಗುತ್ತಿದೆ. ಪಟ್ಟಣದಲ್ಲಿ ಬಹುತೇಕ ಎಲ್ಲಾ ಪಕ್ಷದವರು ಮದ್ಯಾಹ್ನ ಊಟ ಹಂಟಿಕೆ ಮಾಡುತ್ತಿದ್ದಾರೆ. ಆದರೆ ಈ ರೀತಿ ಸರದಿಯಲ್ಲಿ ಬೆಳಿಗ್ಗೆಯಿಂದ ವಯಸ್ಸಾದವರು ಕಾದು ಕೂಡುತ್ತಿದ್ದಾರೆ. ಇಂತಹ ಜನರಿಗೆ ಕೂಡಲು ಒಂದಿಷ್ಟು ನೆರಳು ಮತ್ತು ಕುಡಿಯಲು ನೀರಿನ ವ್ಯವಸ್ಥೆಯಾದರೂ ಕನಿಷ್ಟ ಪಕ್ಷ ಮಾಡಿದರೆ ವೃದ್ದರು, ವಿಕಲಚೇತನರು ಸೇರಿದಂತೆ ಬ್ಯಾಂಕ್ ವ್ಯವಹಾರಕ್ಕೆ ಬಂದಿರುವ ಗ್ರಾಹಕರಿಗೆ ಸಾಮಾಜಿಕ ಅಂತರ ಕಾಪಾಡುವಲ್ಲಿ ಅನುಕೂಲ ವಾಗಲಿದೆ ಎಂದು ಗ್ರಾಹಕರ ಅಭಿಪ್ರಾಯವಾಗಿದೆ.
ಕೂಡಲೇ ಸಂಬ0ಧ ಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಉರಿಬಿಸಿಲಿನಲ್ಲಿ ಗಂಟೆಗಟ್ಟಲೆ ಸರದಿಯಲ್ಲಿ ಸಾಗುತ್ತಿರುವವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿ ಸಾಮಾಜಿಕ ಅಂತರ ಕಾಪಾಡುವಲ್ಲಿ ಕ್ರಮ ಕೈಗೊಳ್ಳಬೇಕಾಗಿದೆ.