Wednesday, August 17, 2022

Latest Posts

ಗುರುಮಠಕಲ್| ಹುತಾತ್ಮರಾದ 20 ಭಾರತೀಯ ವೀರ ಯೋಧರಿಗೆ ಶ್ರದ್ಧಾಂಜಲಿ

ಗುರುಮಠಕಲ್ : ಗುರುಮಠಕಲ್ ಪಟ್ಟಣದ ಜಯ ಕರ್ನಾಟಕ ಸಂಘಟನೆಯ ತಾಲೂಕ ಘಟಕದ ವತಿಯಿಂದ ಪಟ್ಟಣದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದ ಬಳಿ ಭಾರತದ ಗಡಿ ಪ್ರದೇಶಆದ ಗುಲ್ವಾನ್ ಕಣಿವೆ ಪ್ರದೇಶದಲ್ಲಿ ಚೀನಾದ ಕಉತಂತ್ರದಿOದ ಭಾರತದ ರಕ್ಷಣೆಗಾಗಿ ಹುತಾತ್ಮರಾದ 20 ಭಾರತೀಯ ವೀರ ಯೋಧರಿಗೆ ದೀಪ ಬೆಳಗಿಸಿ ಮೌನಚಾರಣೆ ಮಾಡುವ ಮೂಲಕ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಲಾಯಿತು. ಚೀನಾದ ಹೀನ ಕೃತ್ಯವನ್ನು ಖಂಡಿಸಲಾಯಿತು.
ಜಯ ಕರ್ನಾಟಕ ಸಂಘಟನೆಯ ತಾಲೂಕ ಅಧ್ಯಕ್ಷರಾದ ನಾಗೇಶ ಗದ್ದಿಗಿ ಮಾತನಾಡಿ ಇತ್ತೀಚೆಗೆ ಭಾರತ ದೇಶದ ಗಡಿಯಲ್ಲಿ ಕುತಂತ್ರಿ ಚೀನಾದ ಮೋಸದ ಆಟದಲ್ಲಿ ಪ್ರಾಣ ತೆತ್ತ ವೀರ ಯೋಧರ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ಚೀನಾಕ್ಕೆ ತಕ್ಕ ಪ್ರತ್ಯುತ್ತರ ನೀಡಬೇಕು. ನಮ್ಮ ದೇಶದ ಯೋಧರ ಶಕ್ತಿ ಏನು ಎನ್ನುವುದು ತೋರಿಸಿ ಪಾಪಿ ಚೀನಾವನ್ನು ಹತಾಶೆಗೊಳಿಸಬೇಕು ಹಾಗೂ ಚೀನಾ ಸೇರಿದಂತೆ ವಿದೇಶಿ ವಸ್ತುಗಳ ಬಳಕೆ ದಿನೇ ದಿನೇ ಕ್ಷೀಣಿಸುತ್ತದೆ. ಇದು ಚೀನಾಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಹತಾಶೆಗೊಂಡ ಚೀನಾಗಡಿ ಪ್ರದೇಶದ ಗುಲ್ವಾನ್ ಕಣಿವೆಯಲ್ಲಿ ಭಾರತೀಯ ಸುಮಾರು 20 ಯೋಧರನ್ನು ಹತ್ಯೆಗೈದಿದ್ದು ಖಡಿನೀಯ ಎಂದುರು. ಭಾರತಾಂಬೆಯ ರಕ್ಷಣೆಗೆ ವೀರ ಮರಣವನ್ನಪ್ಪಿದ ಯೋಧರ ಅತ್ಮಕ್ಕೆ ಚಿರಶಾಂತಿ ಕೊರಿದು. ಎಲ್ಲಾ ಚೀನಿಯರ ವಸ್ತುಗಳನ್ನು ಬಹಿಷ್ಕರಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಗರ ಘಟಕದ ಅಧ್ಯಕ್ಷರಾದ ಪ್ರವೀಣ್ ಕುಮಾರ ರೆಡ್ಡಿ ಗವಿನೋಳ್, ಕಾರ್ಯಾಧ್ಯಕ್ಷರಾದ ಲಾಲಪ್ಪ ತಲಾರಿ, ಯುವ ಘಟಕದ ಅಧ್ಯಕ್ಷರಾದ ಗೋಪಾಲಕೃಷ್ಣ ಮೇಧಾ, ಎಸ್.ಪಿ.ಮಹೇಶ್ ಗೌಡ, ವಿಜಯಸ್ವಾಮಿ, ವೆಂಕಟೇಶ್ ದಾಸರಿ, ನರಸಿಂಹ ಮಡಿವಾಳ, ಅಂಜಿ, ಭೀಮು, ಹುಸೇನಪ್ಪ,ವೆಂಕಟೇಶ್, ರಮೇಶ್, ಶರಣು ಕೊಂಕಲ್, ಕೃಷ್ಣ ಬಿಚ್ಚಾಲ್, ಲಕ್ಷಣ, ನರಸಿಂಹಲು ದಾಸರಿ, ಸಾಯಪ್ಪ ಮೇಧಾ, ಬಾಲರಾಜು ದಾಸರಿ, ವೆಂಕಟಪ್ಪ, ಹಡಪದ, ರಘು ಕುಂಬಾರ, ಅಂಜಿ ಮಂಗಮ, ಸಾಯಿ ಲಿಕ್ಕಿ, ಶಿವಪ್ಪ, ರಾಮುಲು, ಜಗಪ್ಪ, ಸುರೇಶ್ ಕಾಕಲವಾರ, ಭೀಮು ಯಾದವ್, ಇನ್ನು ಹಲವು ಮುಖಂಡರು ಸಂಘಟನೆ ಕಾರ್ಯಕರ್ತರು ಪದಾಧಿಕಾರಿಗಳು ಭಾಗವಹಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!