spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, September 19, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಗುರುವಾರ ಮಾಸ್ಕ್ ದಿನ: ರಾಜಧಾನಿಯಲ್ಲಿ ಮುಖ್ಯಮಂತ್ರಿಗೆ ಸಾಥ್ ನೀಡಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್!

- Advertisement -Nitte

ಬಂಟ್ವಾಳ: ಕೊರೋನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಮುನ್ನಚ್ಚರಿಕೆ ದೃಷ್ಟಿಯಿಂದ ಸರಕಾರ ಗುರುವಾರ ಮಾಸ್ಕ್ ದಿನವನ್ನಾಗಿ ಆಚರಿಸಲು ಕರೆ ನೀಡಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ನಡೆದ ಮಾಸ್ಕ್ ದಿನಾಚರಣೆ ಜಾಥದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ ಸಹಿತ ಬಂಟ್ವಾಳ ಬಿಜೆಪಿ ಜನಪ್ರತಿನಿಧಿಗಳು, ಹಾಗೂ ಕಾರ್ಯಕರ್ತರು ಹೆಜ್ಜೆ ಹಾಕಿ ಗಮನಸೆಳೆದರು.
ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ,ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ದೇವದಾಸ ಶೆಟ್ಟಿ,ಪವನ್ ಕುಮಾರ್ ಮೊದಲಾದವರು ಡಿಸಿಎಂಗಳು, ಸಚಿವರು,ಶಾಸಕರು,ಕಾರ್ಯಕರ್ತರ ಜೊತೆ ಜಾಥದಲ್ಲಿ ಭಾಗವಹಿಸಿದ್ದರು.
ಬಂಟ್ವಾಳದಲ್ಲು ಜಾಥಾ
ಬಂಟ್ವಾಳ ತಾಲೂಕು ಆಡಳಿತ ಸೇರಿದಂತೆ ಇತರ ಎಲ್ಲಾ ಇಲಾಖೆಗಳ ಸಹಯೋಗದಲ್ಲಿ ಕೋವಿಡ್-19 ಮುನ್ನೆಚ್ಚರಿಕೆಯ ದೃಷ್ಟಿಯಿಂದ ಸರಕಾರದ ಆದೇಶದಂತೆ ಗುರುವಾರ ಮಾಸ್ಕ್ ಡೇಯನ್ನು ಆಚರಿಸಲಾಯಿತು.
ಈ ಹಿನ್ನೆಲೆಯಲ್ಲಿ ಬಿ.ಸಿ.ರೋಡು ಬ್ರಹ್ಮಶ್ರೀ ನಾರಾಯಣ ಗುರು ವೃತ್ತದಿಂದ ಮಿನಿ ವಿಧಾನಸೌಧದವರೆಗೆ ಜನಪ್ರತಿನಿಽಗಳು, ಅಽಕಾರಿಗಳನ್ನೊಳಗೊಂಡ ಜಾಥಾ ನಡೆಯಿತು. ಬಂಟ್ವಾಳ ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರ ಅವರು ಜಾಥಾಕ್ಕೆ ಚಾಲನೆ ನೀಡಿ, ಎಲ್ಲರೂ ಜತೆ ಸೇರಿ ಸರಕಾರದ ನಿರ್ದೇಶನಗಳಂತೆ ಕೋವಿಡ್-೧೯ ವಿರುದ್ಧ ಹೋರಾಡೋಣ ಎಂದು ಕರೆ ನೀಡಿದರು.
ಮಾಸ್ಕ್ ಡೇ ಜಾಥಾದಲ್ಲಿ ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಆಲಿ, ತಹಶೀಲ್ದಾರ್ ರಶ್ಮಿ ಎಸ್.ಆರ್, ತಾ.ಪಂ.ಇಓ ರಾಜಣ್ಣ, ಪುರಸಭಾ ಮುಖ್ಯಾಽಕಾರಿ ಲೀನಾ ಬ್ರಿಟ್ಟೊ, ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಾ ಪ್ರಭು, ಉಪತಹಶೀಲ್ದಾರ್‌ಗಳಾದ ರಾಜೇಶ್ ನಾಯ್ಕ್, ಶ್ರೀಧರ್, ಕಂದಾಯ ನಿರೀಕ್ಷಕರಾದ ರಾಮ ಕಾಟಿಪಳ್ಳ, ನವೀನ್‌ಕುಮಾರ್ ಬೆಂಜನಪದವು, ದಿವಾಕರ್ ಮುಗುಳಿಯ, ಕಂದಾಯ ಇಲಾಖೆ ವಿಷಯ ನಿರ್ವಾಹಕ ವಿಷುಕುಮಾರ್, ಪ್ರಮುಖರಾದ ರಮಾನಾಥ ರಾಯಿ, ವೆಂಕಪ್ಪ ಪೂಜಾರಿ, ಪ್ರಣಾಮ್ ಕುಮಾರ್ ಮೊದಲಾದವರಿದ್ದರು. ಜಾಥಾದ ವೇಳೆ ಮಾಸ್ಕ್ ಇಲ್ಲದೆ ಇರುವ ನಾಗರಿಕರಿಗೆ ಮಾಸ್ಕ್ ವಿತರಿಸಲಾಯಿತು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss