Sunday, August 14, 2022

Latest Posts

ಗುರುವಿಗೆ ಜಗತ್ತನ್ನೇ ಗೆಲ್ಲುಸುವ ಶಕ್ತಿ ಇದೆ: ನಾಡೋಜ ಡಾ. ಮಹೇಶ್‍ಜೋಷಿ

ಮಂಡ್ಯ: ಗುರುವಿಗೆ ಜಗತ್ತನ್ನೇ ಗೆಲ್ಲಿಸುವ ಶಕ್ತಿ ಇದೆ ಎಂದು ನಾಡೋಜ ಹಾಗೂ ದೂರದರ್ಶನ ಕೇಂದ್ರದ ವಿಶ್ರಾಂತ ನಿರ್ದೇಶಕ ಡಾ.ಮಹೇಶ್‍ಜೋಶಿ ಹೇಳಿದರು.
ನಗರದ ಗಾಂಧಿಭವನದಲ್ಲಿ ಅಖಿಲ ಕರ್ನಾಟಕ ಕರಾವಳಿ ಸಾಂಸ್ಕøತಿಕ ಒಕ್ಕೂಟದ ವತಿಯಿಂದ ನಡೆದ ಶಿಕ್ಷಕರ ದಿನಾಚರಣೆ ಮತ್ತು ಪುಸ್ತಕ ಲೋಕಾರ್ಪಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ತಂದೆ-ತಾಯಿ, ದೇವರಿಗಿಂತಲೂ ಗುರುವೇ ಶ್ರೇಷ್ಠ. ನಾವು ಜೀವನದಲ್ಲಿ ಮಾಡುವ ಸಾಧನೆಗೆ ಮಾರ್ಗದರ್ಶಕ, ಪ್ರೇರಣೆ ಗುರುವೇ ಆಗಿರುತ್ತಾನೆ. ನಾವು ಅಳಿದ ನಂತರವೂ ಹೆಸರು ಶಾಶ್ವತವಾಗಿ ಉಳಿಯಲು ಗುರುವೇ ಪ್ರಮುಖ ಕಾರಣ. ಹಾಗಾಗಿ ಗುರುಗಳನ್ನು ಗೌರವಿಸುವ ಕೆಲಸಗಳು ಹೆಚ್ಚಾಗಿ ನಡೆಯಬೇಕು ಎಂದು ಅರಿಸ್ಟಾಟಲ್ ಕುರಿತು ಅಲೆಗ್ಸಾಂಡರ್ ಹೇಳಿದ ಮಾತುಗಳನ್ನು ನೆನಪಿಸಿದರು.
ಪ್ರಸ್ತುತ ಸಮಾಜದಲ್ಲಿ ಪಡೆದುಕೊಳ್ಳುವುದಕ್ಕಿಂತ ಹೊಡೆದುಕೊಂಡು ಹೋಗುವವರೇ ಹೆಚ್ಚಾಗಿದ್ದಾರೆ. ಶೈಕ್ಷಣಿಕ ಕ್ಷೇತ್ರದಲ್ಲಿ ಹಲವಾರು ಸಾಧಕರಿದ್ದಾರೆ. ಇಂಥವರನ್ನು ಗುರುತಿಸುವ ಕೆಲಸ ಮಾಡಬೇಕು. ಆಗ ಅವರ ಕಾರ್ಯ ಮತ್ತು ಸಾಧನೆಗೆ ಇನ್ನೂ ಹೆಚ್ಚು ಪೆÇ್ರೀ ಎಂದು ಹೇಳಿದರು.
ಮಂಡ್ಯ ಜಿಲ್ಲೆ ಕಲಾವಿದರ ತವರೂರಾಗಿದೆ. ಎಲ್ಲ ಕ್ಷೇತ್ರಗಳಲ್ಲೂ ಮಂಡ್ಯದ ದ್ರುವತಾರೆಗಳಿದ್ದಾರೆ. ಮಂಡ್ಯಕ್ಕೆ ತನ್ನದೇ ಆದ ವಿಶೇಷವಾದ ಗೌರವವಿದೆ. ಕನ್ನಡ ಸಾಹಿತ್ಯವನ್ನು ಕಟ್ಟಿ ಬೆಳೆಸಿದ್ದಾರೆ. ಸ್ವಾತಂತ್ರ್ಯ ಸಂಗ್ರಾಮ, ರೈತ, ದಲಿತ ಚಳುವಳಿಗಳು ಹುಟ್ಟಿಕೊಂಡು ದೇಶಾದ್ಯಂತ ಸದ್ದು ಮಾಡಿದ ನೆಲ ಇದಾಗಿದೆ ಎಂದು ಶ್ಲಾಘಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss