ಹೊಸದಿಲ್ಲಿ: ಕೊರೋನಾ ಸೋಂಕಿತರನ್ನು ಗುರುತಿಸುವ ಅತ್ಯಾಧುನಿಕ ಡ್ರೋಣ್ ಒಂದನ್ನು ಗುವಾಹಟಿ ಐಐಟಿ ಸಂಸ್ಥೆ ಸಿದ್ಧಪಡಿಸಿದೆ.
ಈ ಡ್ರೋಣ್ ಈಗಾಗಲೇ ತೆಲಂಗಾಣ ಹಾಗೂ ಆಂಧ್ರದಲ್ಲಿ ಬಳಕೆಯಲ್ಲಿದೆ. ಹೆಚ್ಚಾಗಿ ಜನರು ಗುಂಪು ಸೇರುವ ಜಾಗದಲ್ಲಿ ಡ್ರೋಣ್ ಪ್ರಯೋಗದಿಂದ ಅಲ್ಲಿ ಎಷ್ಟು ಮಂದಿಗೆ ಸೋಂಕು ಅಂಟಿದೆ ಎಂಬುದನ್ನು ಇದು ಪತ್ತೆಹಚ್ಚಬಲ್ಲದು. ಕೇವಲ ಅಲ್ಲಿ ನೆರೆದವರ ತಾಪಮಾನವನ್ನು ಖಚಿತವಾಗಿ ಅಳೆಯುವ ಡ್ರೋಣ್ ಈಗ ಪುರಸಭೆ ಹಾಗೂ ನಗರಸಭೆ ಮತ್ತು ನಗರಪಾಲಿಕೆ ಆಡಳಿತವರ್ಗಕ್ಕೆ ಸಹಾಯಕವಾಗಿದೆ.
ಗುಂಪುಗಳಿರುವ ಕಡೆ ಈ ಡ್ರೋಣ್ ಪ್ರಯೋಗಿಸುವುದರಿಂದ ಕೊರೋನಾ ಸೋಂಕಿತರನ್ನು ಪತ್ತೆಹಚ್ಚಲು ಸಾಧ್ಯ ಎಂದು ಐಐಟಿ ಸಂಶೋಧಕರು ಹೇಳಿದ್ದಾರೆ.