ಹೊಸದಿಲ್ಲಿ: ನಿಮ್ಮ Gmail, Google ಡ್ರೈವ್ ಅಥವಾ Google ಮೀಟ್ ಬಳಕೆ ಮಾಡಲು ತೊಂದರೆಯಾಗುತ್ತಿದೆಯೇ? ಆತಂಕ ಪಡಬೇಡಿ. ಭಾರತ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಈ ತೊಂದರೆ ಕಂಡುಬಂದಿದೆ.
ಭಾರತ, ಯು.ಎಸ್., ಆಸ್ಟ್ರೇಲಿಯಾ, ಜಪಾನ್ ಮತ್ತು ಮಲೇಷ್ಯಾದ ಕೆಲವು ಭಾಗಗಳಲ್ಲಿ ಗೂಗಲ್ ಸೇವೆಗಳನ್ನು ಬಳಸಲು ಸಾಧ್ಯವಾಗುತ್ತಿಲ್ಲ ಎಂದು ದೂರು ನೀಡಲಾಗಿದೆ.
ಲಾಕ್ ಇನ್ ತೊಂದರೆ, ಫೈಲ್, ಫೋಟೋ, ವಿಡಿಯೋ ಕಳುಹಿಸಲಾಗುತ್ತಿಲ್ಲ ಎಂದು ದೂರದ್ದು, ಜಿ ಮೇಲ್, ಜಿ ಸ್ಯೂಟ್, ಗೂಗಲ್ ಡಾಕ್ಸ್, ಗೂಗಲ್ ಡ್ರೈವ್ ಗಳಲ್ಲಿ ಈ ತೊಂದರೆ ಕಾಣಿಸಿಕೊಂಡಿದೆ. ಸಮಸ್ಯೆಗಳ ವರದಿಗಳನ್ನು ದೃಢಪಡಿಸಿದ ಗೂಗಲ್, ನಾವು ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸಲಿಸಿ ಮಧ್ಯಾಹ್ನ 1.30ರ ವೇಳೆಗೆ ಮಾಹಿತಿ ನೀಡಲಾಗುವುದು ಎಂದು ತಿಳಿಸಿದೆ.
ಇದನ್ನು ಟ್ವಿಟರ್ ಸೇರಿದಂತೆ ಇತರೆ ಸಾಮಾಜಿಕ ಜಾಲತಾಣಗಳಲ್ಲಿ #Gmail ಬಳಸಿ ತಮಗೆ ಆದ ತೊಂದರೆಗಳನ್ನು ಅಪ್ಲೋಡ್ ಮಾಡಿ ಟ್ರೆಂಡ್ ಮಾಡುತ್ತಿದ್ದಾರೆ.