ಹೊಸದಿಗಂತ ವರದಿ,ಮೈಸೂರು:
ಪ್ರಸ್ತುತ ಪೀಳಿಗೆ ಮತದಾರರು ತಮ್ಮ ಬಳಿ ಕಾರು, ಬೈಕ್ಗಳಿದ್ದರೂ ಚುನಾವಣೆಯ ದಿನಗಳಂದು ಮತಗಟ್ಟೆಗೆ ಆಗಮಿಸಿ ಮತದಾನ ಮಾಡಲು ನಿರ್ಲಕ್ಷ್ಯ ತೋರುತ್ತಾರೆ. ಆ ಮೂಲಕ ತಮ್ಮ ಹಕ್ಕನ್ನು ಚಲಾಯಿಸದೆ ಕರ್ತವ್ಯದಿಂದ ವಿಮುಖರಾಗುತ್ತಾರೆ.
ಆದರೆ ಇವರಿಗೆಲ್ಲಾ ಮಾದರಿ ಎಂಬoತೆ ಚುನಾವಣೆಗಳಲ್ಲಿ ಶತಾಯುಷಿಗಳು ಬಹಳ ಉತ್ಸಾಹದಿಂದಲೇ ಮತಗಟ್ಟೆಗಳಿಗೆ ಆಗಮಿಸಿ, ಸ್ಥಳದಲ್ಲಿರುವವರ ಇಲ್ಲವೇ ತಮ್ಮ ಸಂಬoಧಿಕರ ನೆರವಿನಿಂದ ಮತದಾನ ಮಾಡುತ್ತಾರೆ. ಇದೇ ರೀತಿ ಇಂದು ನಡೆದ ಗ್ರಾಮಪಂಚಾಯಿತಿ ಚುನಾವಣೆಯಲ್ಲಿ ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಬೊಕ್ಕಹಳ್ಳಿ ಗ್ರಾಮದಲ್ಲಿ ಗೂಡ್ಸ್ ಆಟೋದಲ್ಲಿ ಬಂದು ಶತಾಯುಸಿ ಜಯಮ್ಮ (101) ಮತದಾನ ಮಾಡಿದರು. ಆಮೂಲಕ ಜೀವನದ ಸಂಧ್ಯಾ ಕಾಲದಲ್ಲೂ ಅವರು ತಮ್ಮ ಹಕ್ಕು ಚಲಾಯಿಸಿದರು.