Wednesday, July 6, 2022

Latest Posts

ಗೂಬೆ ಕೂರಿಸಬೇಡಿ, ಯಾವುದನ್ನೂ ಮುಚ್ಚಿಟ್ಟಿಲ್ಲ : ಅಮೆರಿಕ ವಿರುದ್ಧ ಚೀನಾ ಗುಡುಗು !

ಬೀಜಿಂಗ್ : ಕೊರೋನಾ ಸೋಂಕು ಪ್ರಕರಣಗಳ ನೈಜತೆಯನ್ನು ಶಂಕಿಸಿದ ಅಮೆರಿಕ ವಿರುದ್ದ ಚೀನಾ ಕೆಂಡ ಕಾರಿದೆ. ಈ ವಿಚಾರದಲ್ಲಿ ವಿಶ್ವಕ್ಕೆ ತಾನೇನೂ ಮುಚ್ಚಿಟ್ಟಿಲ್ಲ ಎಂದೂ ಚೀನಾ ಸ್ಪಷ್ಟಪಡಿಸಿದೆ.
ವಿದೇಶಾಂಗ ಖಾತೆ ವಕ್ತಾರ ಲಿಜೋ, ಈ ದಿಶೆಯಲ್ಲಿ ಸದೀರ್ಘ ಪ್ರಕಟಣೆಯೊಂದನ್ನು ನೀಡಿದ್ದು , ವಿಜ್ಞಾನದ ಆವಿಷ್ಕಾರಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳದ ಅಮೆರಿಕ ಚೀನಾ ಮೇಲೆ ಗೂಬೆ ಕೂರಿಸುವ ಕೆಲಸವನ್ನು ಮಾಡಿದೆ. ಅಲ್ಲದೆ ಈ ಮೂಲಕ ಇಡೀ ಪ್ರಪಂಚದ ಗಮನವನ್ನು ಬೇರೆಡೆಗೆ ಸೆಳೆಯಲು ಅಮೆರಿಕ ಹುನ್ನಾರ ನಡೆಸಿದೆ ಎಂದು ವಕ್ತಾರರು ದೊಡ್ಡಣ್ಣನಿಗೆ ತಿರುಗೇಟು ಹಾಕಿದ್ದಾರೆ.
ವುಹಾನ್ ಸೇರಿದಂತೆ ದೇಶದಲ್ಲಿ ಇದುವರೆಗೆ ವರದಿಯಾದ ಪ್ರಕರಣಗಳಿಗಿಂತ ಶೇ ೫೦ ರಷ್ಟು ಹೆಚ್ಚು ಪ್ರಕರಣಗಳು ಸಂಭವಿಸಿರುವ ಬಗ್ಗೆ ಈಗ ನೀಡಿದ ವಿವರಗಳು ಸರಿಯಾಗಿವೆ. ಅಲ್ಲದೆ ಈ ಹಿಂದೆ ಕೆಲವೊಂದು ಪ್ರಕರಣಗಳು ವೈದ್ಯಕೀಯವಾಗಿ ಕೊರೋನಾ ಎಂದು ದೃಢಪಟ್ಟಿರಲಿಲ್ಲ. ಆದರೆ ದೇಶದಲ್ಲಿ ಇದುವರೆಗೆ ಸಂಭವಿಸಿರುವ ಎಲ್ಲ ಕೊರೋನಾ ಸಾವು ಮತ್ತು ಸೋಂಕಿನ ಪ್ರಕರಣಗಳನ್ನು ವಿಜ್ಞಾನ ಪ್ರಯೋಗಾಲಯದಲ್ಲಿ ದೃಢೀಕರಿಸಲು ಇಷ್ಟು ದಿನ ಬೇಕಾಯಿತು. ಯಾವುದೂ ವೈಜ್ಞಾನಿಕ ಪ್ರಯೋಗಾಲಯದಲ್ಲಿ ಸಾಬೀತಾಗದೆ ಅದರ ಬಗ್ಗೆ ಹೇಳಿಕೆ ನೀಡುವುದು ಸರಿಯಲ್ಲ . ಆದರೆ ಅಮೆರಿಕ ಇದರ ಲಾಭ ಪಡೆದು ಕೊರೋನಾ, ಚೀನಾದಲ್ಲೇ ಹುಟ್ಟಿದೆ ಎಂಬರ್ಥದಲ್ಲಿ ದುಷ್ಪ್ರಚಾರ ಶುರು ಮಾಡಿರುವುದನ್ನು ಚೀನಾ ಬಲವಾಗಿ ಖಂಡಿಸುತ್ತದೆ. ಕೊರೋನಾ ಮೂಲ ಸ್ಥಾನ ವುಹಾನ್ ಅಲ್ಲವೇ ಅಲ್ಲ. ಈ ವೈರಾಣು ಮೊದಲು ಎಲ್ಲಿ ಸೃಷ್ಟಿಯಾಯಿತು ಎಂಬುದು ಇಂದಿನ ವಿಜ್ಞಾನಲೋಕಕ್ಕೆ ಒಂದು ಸವಾಲು. ಅದನ್ನು ಪತ್ತೆ ಹಚ್ಚುವ ಕೆಲಸದಲ್ಲಿ ಚೀನಾ ನಿರತವಾಗಿದೆ. ಆದರೆ ಅಮೆರಿಕ ಮಾತ್ರ ಕೊರೋನಾ ರೋಗಾಣುವಿಗೆ ಖಾಯಂ ಪರಿಹಾರ ಕಂಡು ಹಿಡಿಯುವ ಬದಲು ಚೀನಾ ವಿರುದ್ದ ಟೀಕೆಯಲ್ಲಿ ತೊಡಗಿರುವುದು ದುರದೃಷ್ಟಕರ ಎಂದು ವಕ್ತಾರರು ಕಡಾಖಂಡಿತವಾಗಿ ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss