ಹೊಸದಿಗಂತ ಆನ್ಲೈನ್ ಡೆಸ್ಕ್:
ಜೀವಂತ ಗೂಬೆಯ ತಲೆಯನ್ನು ಕತ್ತರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಫೋಟೊಸ್ ಶೇರ್ ಮಾಡಿದ್ದ ಯುವತಿಯ ಹತ್ಯೆಯಾಗಿದೆ.
ಗೂಬೆಯ ತಲೆ ಕತ್ತರಿಸಿ ಫೋಟೊ,ವಿಡಿಯೋ ಅಪ್ಲೋಡ್ ಮಾಡಿದ ಆರು ತಿಂಗಳ ಒಳಗೆ ಆಕೆಯನ್ನು ಗುಂಡಿಕ್ಕಿ ಕೊಲೆ ಮಾಡಲಾಗಿದೆ.
ಕೊಲಂಬಿಯಾದ ಸುಕ್ರೆ ರಾಜ್ಯದ ಕರೊಕಾಲಾ ನಿವಾಸ ಮಿಲೆಡಿಸ್ ಅಲ್ಡಾನಾ ಮೃತರು. ಆರು ತಿಂಗಳ ಹಿಂದೆ ಗೂಬೆ ಕೊಂದಿದ್ದ ವಿಡಿಯೋದಿಂದಾಗಿ ಪ್ರಾಣಿಪ್ರಿಯರು ಆಕೆಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. ಮನೆಯ ಹೊರಗೆ ಬೈಕ್ನಲ್ಲಿ ಇಬ್ಬರು ವ್ಯಕ್ತಿಗಳು ಬಂದು ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಯುವತಿಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟರೊಳಗೆ ಆಕೆ ಪ್ರಾಣಪಕ್ಷಿ ಹಾರಿಹೋಗಿದೆ. ಗೂಬೆ ಕೊಂದದ್ದಕ್ಕೆ ಪೊಲೀಸ್ ವಿಚಾರಣೆ ಎದುರಿಸುತ್ತಿದ್ದ ಯುವತಿಯನ್ನು ಯಾವ ಕಾರಣಕ್ಕೆ,ಯಾರು ಕೊಲೆ ಮಾಡಿದ್ದಾರೆ ಎಂದು ಪತ್ತೆಹಚ್ಚಲಾಗುತ್ತಿದೆ.