Sunday, August 14, 2022

Latest Posts

ಗೆದ್ದ ಮರುದಿನದಿಂದಲೇ ದೇಶದ ಕೋವಿಡ್ ರಿಪೋಟ್೯ ತರಿಸಿಕೊಳ್ತಿದ್ದಾರೆ ಮಿ. ಪ್ರೆಸಿಡೆಂಟ್!

ಹೊಸ ದಿಗಂತ ಆನ್ ಲೈನ್ ಡೆಸ್ಕ್: 

ಅಮೆರಿಕಾದಲ್ಲಿ ಕೊರೋನಾ ಅಟ್ಟಹಾಸ ಹೆಚ್ಚುತ್ತಲೇ ಇದೆ. ನಿಯಂತ್ರಣಕ್ಕೆ ಬರದ ಕೊರೋನಾ ಸೋಂಕಿಗೆ ಬೇಕ್ ಹಾಕಲು ಸೋಮವಾರ ಕೋವಿಡ್ ಸಲಹೆಗಾರರನ್ನು ನೇಮಕ ಮಾಡಲಾಗುವುದಾಗಿ ನೂತನ ಅಧ್ಯಕ್ಷ ಜೋ ಬಿಡನ್ ಹೇಳಿದ್ದಾರೆ.

ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಮಾತನಾಡಿದ ಜೋ ಬಿಡನ್ ನನ್ನ ಮೊದಲ ಗುರಿ ಅಮೆರಿಕದಲ್ಲಿ ನಿಯಂತ್ರನ ತಪ್ಪಿದ ಕೊರೋನಾವನ್ನು ನಿಯಂತ್ರಣ ತರುವುದಾಗಿದೆ.

ಈಗಾಗಲೇ  ಈ ಸಂಬಂಧ ಕ್ರಿಯಾ ಯೋಜನೆ ರೂಪಿಸಿಲಾಗಿದೆ. ಸೋಮವಾರ ಕೋವಿಡ್ ಸಲಹೆಗಾರರನ್ನು ನೇಮಕ ಮಾಡಲಾಗುತ್ತದೆ. ಈ ಸಲಹೆಗಾರರ ತಂಡದಲ್ಲಿ ದೇಶದ ನುರಿತ ವಿಜ್ಞಾನಿಗಳು , ವೈದ್ಯರು ಮತ್ತು ಆರೋಗ್ಯ ಇಲಾಖೆಯ ನುರಿತ ಅಧಿಕಾರಿಗಳು ಇರಲಿದ್ದಾರೆ ಎಂದು ಹೇಳಿದರು.

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss